ಚಿನ್ನಾಭರಣ ಸ್ಕೀಂ ನೆಡಸಿ ಗ್ರಾಹಕರಿಗೆ ಪಂಗನಾಮ ಹಾಕಿದ ಕಡಬದ ರಾಜಧಾನಿ ಜ್ಯುವೆಲ್ಲರ್ಸ್

ಪುತ್ತೂರು ಜೂನ್ 1: ಚಿನ್ನ ಖರೀದಿಯ ಸಲುವಾಗಿ ಚಿನ್ನಾಭರಣ ಸ್ಕೀಂ ಮಾಡಿ ಗ್ರಾಹಕರಿಗೆ ಪಂಗನಾಮ ಹಾಕಿರುವ ಘಟನೆ ಪುತ್ತೂರಿನ ಕಡಬದಲ್ಲಿ ನಡೆದಿದೆ.

ಕಡಬದ ರಾಜಧಾನಿ ಜ್ಯುವೆಲ್ಲರ್ಸ್ ಜನರಿಂದ ಚಿನ್ನಾಭರಣ ಸ್ಕೀಂನಲ್ಲಿ ಹಣ ತೊಡಗಸಿ ಪಂಗನಾಮ ಹಾಕಿದೆ. ಕಡಬದ ರಾಜಧಾನಿ ಜ್ಯುವೆಲ್ಲರಿಯ ಮಾಲೀಕ ಅಕ್ರಮವಾಗಿ ಚಿನ್ನಾಭರಣದ ಸ್ಕೀಮ್ ಆರಂಭಿಸಿ ಗ್ರಾಹಕರಿಂದ ಚಿನ್ನ ಖರೀದಿಯ ಸಲುವಾಗಿ ಹಣಹೂಡಿಕೆ ಮಾಡಿಸಿದ್ದಾರೆ.

ಆದರೆ ಗ್ರಾಹಕರ ಚಿನ್ನಾಭರಣ ಸ್ಕೀಮ್ ಮುಕ್ತಾಯವಾಗುತ್ತಿದ್ದಂತೆ ರಾಜಧಾನಿ ಜ್ಯುವೆಲ್ಲರ್ಸ್ ಏಕಾಏಕಿ ಬಂದ್ ಆಗಿದೆ. ನೂರಾರು ಗ್ರಾಹಕರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿ ಗ್ರಾಹಕರ ಸ್ಕೀಮ್ ಹಣದೊಂದಿಗೆ ರಾಜಧಾನಿ ಜ್ಯುವೆಲ್ಲರ್ಸ್ ಮಾಲೀಕ ಪರಾರಿಯಾಗಿದ್ದಾನೆ. ಇನ್ನು ಈ ಬಗ್ಗೆ ಆಲೀಸ್ ಎಂಬವರು ತಮಗಾದ ಮೋಸದ ಕುರಿತು ಕಡಬ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

21 Shares

Facebook Comments

comments