Connect with us

    LATEST NEWS

    ಈ ಗ್ರಾಮದಲ್ಲಿ ಜೀನ್ಸ್​ ಹಾಕಿದ್ರೆ ಊರಿಂದ ಬಹಿಷ್ಕಾರ..!

    ಲಖನೌ, ಮಾರ್ಚ್ 11 : ಗ್ರಾಮಗಳಲ್ಲಿ ಚಿತ್ರ ವಿಚಿತ್ರ ನಿಯಮಗಳನ್ನು ಮಾಡಿಕೊಂಡು ಅದರ ಪರಿಪಾಲನೆ ಮಾಡುವುದನ್ನು ನೋಡಿರುತ್ತೀರಿ. ಇಲ್ಲೊಂದು ಗ್ರಾಮ ಪಂಚಾಯಿತಿಯಲ್ಲಿ ಮಾಡಿರುವ ನಿಯಮದಿಂದಾಗಿ ಗ್ರಾಮದ ಯುವಕ-ಯುವತಿಯರು ತಲೆ ಕೆಡಿಸಿಕೊಂಡು ಬಿಟ್ಟಿದ್ದಾರೆ.

    ಉತ್ತರ ಪ್ರದೇಶದ ಮುಜಾಫರ್​ನಗರ ಜಿಲ್ಲೆಯ ಖಾಪ್​ ಗ್ರಾಮ ಪಂಚಾಯಿತಿ ಒಂದು ಹೊಸ ರೀತಿಯ ನಿಯಮ ಜಾರಿ ಮಾಡಿದೆ. ಗ್ರಾಮದಲ್ಲಿ ಯಾವೊಬ್ಬ ಮಹಿಳೆ ಅಥವಾ ಯುವತಿಯು ಜೀನ್ಸ್​ ಪ್ಯಾಂಟ್, ಸ್ಕರ್ಟ್​ ಧರಿಸುವಂತಿಲ್ಲ. ಹಾಗೆಯೇ ಗಂಡು ಮಕ್ಕಳು ಶಾರ್ಟ್ಸ್​ ಹಾಕಿಕೊಳ್ಳುವಂತಿಲ್ಲ. ಹಾಗೊಂದು ವೇಳೆ ನಿಯಮ ಮೀರಿ ಹಾಕಿಕೊಂಡಿದ್ದೇ ಆದಲ್ಲಿ ಅವರನ್ನು ಗ್ರಾಮದಿಂದ ಬಹಿಷ್ಕರಿಸಲಾಗುವುದು ಎನ್ನುವ ನಿಯಮವನ್ನು ಗ್ರಾಮ ಪಂಚಾಯಿತಿ ಮಾಡಿದೆ.

    ಈ ನಿಯಮ ಮಕ್ಕಳಿಗೆ ಇರುವುದಿಲ್ಲ. ವಯಸ್ಕರು ಯಾವುದೇ ಕಾರಣಕ್ಕೂ ಮೊಣಕಾಲಿಗಿಂತ ಮೇಲೆ ಬರುವ ಬಟ್ಟೆಗಳನ್ನು ಧರಿಸವಂತಿಲ್ಲ. ಈ ವಿಚಾರವವಾಗಿ ಶಾಲೆಗಳ ಆಡಳಿತದೊಂದಿಗೂ ಮಾತನಾಡಿರುವುದಾಗಿ ತಿಳಿಸಲಾಗಿದೆ.

    ಬಹಿಷ್ಕಾರದ ಉದ್ದೇಶ: ಜೀನ್ಸ್​, ಶಾರ್ಟ್ಸ್​, ಸ್ಕರ್ಟ್ ಎಲ್ಲ ನಮ್ಮ ಸಂಸ್ಕೃತಿಯಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯಿಂದ ನಮ್ಮ ಸಮಾಜ ಹಾಳಾಗುತ್ತಿದೆ. ಹಾಗಾಗಿ ಗ್ರಾಮ ಪಂಚಾಯಿತಿ ಸದಸ್ಯರೆಲ್ಲ ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಕಿಸಾಣ್​ ಸಂಘಟನೆ ಅಧ್ಯಕ್ಷ ಠಾಕೂರ್​ ಪುರಾಣ್​ ಸಿಂಗ್​ ತಿಳಿಸಿದ್ದಾರೆ. ಈ ಕುರಿತಾಗಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​ಗೆ ಮಾಹಿತಿ ತಲುಪಿದ್ದು, ತನಿಖೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply