Connect with us

UDUPI

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಸುದ್ದಿಯ ಬಗ್ಗೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಸುದ್ದಿಯ ಬಗ್ಗೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಪ್ರತಿಕ್ರಿಯೆ

ಉಡುಪಿ ಡಿಸೆಂಬರ್ 9: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಆಯ್ಕೆ ಎಂಬ ಸುದ್ದಿ ಬಗ್ಗೆ ಜಯಪ್ರಕಾಶ್ ಹೆಗ್ಡೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಕೋಟದಲ್ಲಿ ಮಾತನಾಡಿದ ಅವರು ಇದು ಗಾಳಿ ಸುದ್ದಿಯಲ್ಲ ಇದು ಸೃಷ್ಠಿ ಮಾಡಿದ ಸುದ್ದಿ, ನನ್ನ ಕುರಿತು ಸುದ್ದಿ ಹಾಕುವ ಮೊದಲು ನನ್ನ ಬಳಿ ಮಾತನಾಡಿ ಆ ಬಗ್ಗೆ ಸ್ಪಷ್ಟನೆ ಪಡೆದು ಸುದ್ದಿ ಹಾಕಬೇಕು. ಸುಮ್ಮನೆ ಊಹಾಪೋಹಗಳನ್ನೇಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟರೆ ನಮ್ಮ ಕಾರ್ಯಕರ್ತರಿಗೆ ಗೊಂದಲವಾಗುತ್ತದೆ.

ನಾನು ಸಂಸದ ನಾಗಿದ್ದಲೂ ಕೂಡ ಅಹಮದ್ ಪಟೇಲ್ ಅವರನ್ನು ಭೇಟಿಯಾಗಿಲ್ಲ ಈಗ ಆಗುತ್ತೇನಾ, ಕುಮಾರಸ್ವಾಮಿಯವರು ರಾಜ್ಯದ ಮುಖ್ಯ ಮಂತ್ರಿಗಳು ಅವರ ಭೇಟಿಯನ್ನು ತಪ್ಪಾಗಿ ಅರ್ಥೈಸಿಬೇಡಿ. ಬಿಜೆಪಿ ಪಕ್ಷ ಅವಕಾಶ ನೀಡಿದರೆ ಮತ್ತೆ ಉಡುಪಿ ಚಿಕ್ಕಮಗಳೂರು ಕ್ಷೇತ್ರ ಅಭ್ಯರ್ಥಿಯಾಗುತ್ತೇನೆ, ಇದು ಪಕ್ಷಕ್ಕೆ ಬಿಟ್ಟ ತಿರ್ಮಾನ ಎಂದು ಪ್ರತಿಕ್ರಿಯಿಸಿದ್ದಾರೆ.

Facebook Comments

comments