ತಿರುಮಲ: ತಿರುಪತಿ ದೇವಸ್ಥಾನದಲ್ಲಿ ವಿಐಪಿ ಸವಲತ್ತು ಇದ್ದರೂ ಅದನ್ನು ನಾನು ಯಾಕೆ ಬಳಸುವುದಿಲ್ಲ ಎಂದು ಬಾಲಿವುಡ್ ನಟಿ ಜಾಹ್ನವಿ ಕಪೂರ್ ತಿಳಿಸಿದ್ದಾರೆ. ನಟಿ ಜಾಹ್ನವಿ ಅವರು ತಮಗೆ ಲಭ್ಯವಿದ್ದ ಎಲ್ಲಾ ವಿಐಪಿ ಸವಲತ್ತುಗಳನ್ನು ನಿರಾಕರಿಸಿ , ಸಾಮಾನ್ಯ ಭಕ್ತರಂತೆ 3,500 ಮೆಟ್ಟಿಲುಗಳನ್ನು ಬರಿಗಾಲಿನಲ್ಲಿ ಹತ್ತಿ ದೇವಸ್ಥಾನಕ್ಕೆ ತಲುಪುತ್ತಾರೆ.

ರಾಜ್ ಶಮಾನಿ ಅವರೊಂದಿಗಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಜಾಹ್ನವಿ, “ತಿರುಪತಿಯಲ್ಲಿ ಸಾವಿರಾರು ಭಕ್ತರು ಗಂಟೆಗಟ್ಟಲೆ ಕಾಯುತ್ತಾರೆ. ಅವರ ಜೊತೆ ಸಮಯ ಕಳೆಯುವುದು ನನ್ನ ಅದೃಷ್ಟ. ನಾನು ಪ್ರತಿ ಬಾರಿ ತಿರುಮಲಕ್ಕೆ ಹೋದಾಗಲೂ ಮೆಟ್ಟಿಲು ಹತ್ತಿ ಹೋಗದಿದ್ದರೆ ನನ್ನ ದರ್ಶನ ಪೂರ್ಣವಾಗುವುದಿಲ್ಲ ಎಂದು ಭಾವಿಸುತ್ತೇನೆ” ಎಂದಿದ್ದಾರೆ. ಜಾಹ್ನವಿ ಅವರ ತಾಯಿ, ದಿವಂಗತ ನಟಿ ಶ್ರೀದೇವಿ ಅವರು ಕೂಡ ಇದೇ ರೀತಿ ಪಾದಚಾರಿ ಮಾರ್ಗದಲ್ಲಿ ಸಾಗಿ ತಿಮ್ಮಪ್ಪನ ದರ್ಶನ ಪಡೆಯುವ ಸಂಪ್ರದಾಯ ಹೊಂದಿದ್ದರು. ಈಗ ಮಗಳು ಕೂಡ ತಾಯಿಯ ಹಾದಿಯನ್ನೇ ಅನುಸರಿಸುತ್ತಿದ್ದಾರೆ.