ಜನವರಿ 9 ಮಂಗಳೂರು ಬಂದ್ ಗೆ ದಕ್ಷಿಣಕನ್ನಡ ಜಿಲ್ಲಾ ಯುವ ಕಾಂಗ್ರೇಸ್ ಕರೆ

ಮಂಗಳೂರು ಜನವರಿ 6: ಕೇಂದ್ರ ಸರಕಾರ ಕರಾವಳಿ ಮೂಲದ ವಿಜಯಾ ಬ್ಯಾಂಕ್ ನ್ನು ಬ್ಯಾಂಕ್ ಆಫ್ ಬರೋಡಾ ಹಾಗೂ ದೇನಾ ಬ್ಯಾಂಕ್ ನೊಂದಿಗೆ ವೀಲಿನ ವಿರೋಧಿಸಿ ಜನವರಿ 9 ರಂದು ಮಂಗಳೂರು ಬಂದ್ ದಕ್ಷಿಣಕನ್ನಡ ಜಿಲ್ಲಾ ಯುವ ಕಾಂಗ್ರೇಸ್ ಕರೆ ನೀಡಿದೆ.

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣಕನ್ನಡ ಜಿಲ್ಲಾ ಯೂತ್ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಮಿಥುನ್ ಲಾಭದಲ್ಲಿರುವ ವಿಜಯಾ ಬ್ಯಾಂಕ್ ನ್ನು ನಷ್ಟದಲ್ಲಿರುವ ಎರಡು ಬ್ಯಾಂಕ್ ಗಳೊಂದಿಗೆ ವಿಲೀನಗೊಳಿಸುವ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲು ಮೌನ ವಹಿಸಿರುವುದು ಯಾಕೆ? ಪ್ರಧಾನಿ ನರೇಂದ್ರ ಮೋದಿಗೆ ಸಂಸದರು ದ.ಕ. ಜಿಲ್ಲೆಯನ್ನು ಒತ್ತೆ ಇಟ್ಟಿದ್ದಾರೆಯೇ ಎಂದು ಮಿಥುನ್ ರೈ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನಲೆಯಲ್ಲಿ ವಿಜಯಾ ಬ್ಯಾಂಕ್ ವಿಲೀನ ವಿರೋಧಿಸಿ ಜನವರಿ 9 ರಂದು ಮಂಗಳೂರು ಬಂದ್ ಗೆ ಕರೆ ನೀಡಲಾಗಿದೆ ಎಂದು ಹೇಳಿದರು. ಜನವರಿ 9ರಂದು ಬೆಳಗ್ಗೆ 6ರಿಂದ ಸಂಜೆ 4 ರವರೆಗೆ ಬಂದ್ ನಡೆಸಲಾಗುವುದು ಎಂದರು.

ಜನವರಿ 9ರ ಬಂದ್ ಯಶಸ್ವಿಗೊಳಿಸಲು ಬಸ್ ಮಾಲಕರು, ಹೊಟೇಲ್ ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜೊತೆ ಮಾತನಾಡಲಾಗುವುದು. ಸಂಸದ ನಳಿನ್ ಕೂಡಾ ಬಂದ್‌ಗೆ ಕೈ ಜೋಡಿಸಲಿ ಎಂದು ಅವರು ಆಗ್ರಹಿಸಿದರು.

Facebook Comments

comments