Connect with us

LATEST NEWS

ನಿಜವಾದ ಪಿ. ಚಿದಂಬರ ಬಗ್ಗೆ ಕಾಂಗ್ರೇಸ್ ಹಿರಿಯ ನಾಯಕ ಜನಾರ್ಧನ ಪೂಜಾರಿ ಹೇಳಿದ ಭವಿಷ್ಯ

ನಿಜವಾದ ಪಿ. ಚಿದಂಬರ ಬಗ್ಗೆ ಕಾಂಗ್ರೇಸ್ ಹಿರಿಯ ನಾಯಕ ಜನಾರ್ಧನ ಪೂಜಾರಿ ಹೇಳಿದ ಭವಿಷ್ಯ

ಮಂಗಳೂರು ಅಗಸ್ಟ್ 22: ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಕೇಂದ್ರ ಮಾಜಿ ಸಚಿವ ಪಿ. ಚಿದಂಬರ ಅವರ ಹಗರಣಗಳ ಬಗ್ಗೆ ಕಾಂಗ್ರೇಸ್ ಹಿರಿಯ ಮುಖಂಡ ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ಅವರು ಹೇಳಿದ್ದ ಭವಿಷ್ಯ ಈಗ ನಿಜವಾಗಿದೆ.ಈ ಕುರಿತ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

2018ರ ವಿಧಾನಸಭೆ ಚನಾವಣೆ ಸಂದರ್ಭದಲ್ಲಿ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೇಸ್ ನ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಪಿ. ಚಿದಂಬರ ಅವರ ಅಕ್ರಮಗಳ ಬಗ್ಗೆ ಮಾತನಾಡಿದ್ದರು, ಚಿದಂಬರ ಅವರ ಏನು ಮಾಡಿದ್ದಾರೆ ಎಂದು ಬಿಜೆಪಿ ಅವರಿಗೆ ಹೇಳಿದರೆ ಕಾಂಗ್ರೇಸ್ ಸರ್ವನಾಶವಾಗುತ್ತದೆ. ನೋಡಿ ಒಂದಲ್ಲಾ ಒಂದು ದಿನ ಬಿಜೆಪಿಯವರು ಚಿದಂಬರ ಅವರ ಅಕ್ರಮಗಳನ್ನು ಬಯಲಿಗೆ ತರುತ್ತಾರೆ ಎಂದು ಭವಿಷ್ಯ ನುಡಿದಿದ್ದರು.

ಅದರಂತೆ ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸಿಬಿಐ ನಿಂದ ಬಂಧನಕ್ಕೊಳಗಾಗಿದ್ದ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರ ಅವರನ್ನು ಸುಪ್ರೀಂಕೋರ್ಟ್ ಮತ್ತೆ 5 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿದೆ.

ಈಗ ಪೂಜಾರಿ ಅವರ ಭವಿಷ್ಯ ನಿಜವಾಗಿದ್ದು, ಕೇಂದ್ರದ ಗೃಹ ಸಚಿವರಾಗಿದ್ದ ಚಿದಂಬರ ತಾವೇ ಉದ್ಘಾಟಿಸಿದ್ದ ಸಿಬಿಐ ಕಚೇರಿಯಲ್ಲಿ ಬಂಧಿಯಾಗುವಂತಾಗಿದೆ. ಸುಪ್ರಿಂಕೋರ್ಟ್ ಇಂದು ಚಿದಂಬರ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಅವರನ್ನು 5 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿದೆ.

ಕಾಂಗ್ರೇಸ್ ನ ಹಿರಿಯ ನಾಯಕ ಪೂಜಾರಿ ಅವರು ಚಿದಂಬರ ಅವರ ಬಗ್ಗೆ ಹೇಳಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪೂಜಾರಿ ಅವರ ಭವಿಷ್ಯ ಇಂದು ನಿಜವಾಗಿದೆ ಎಂದು ಪ್ರತಿಕ್ರಿಯೆಗಳು ಬರುತ್ತಿದೆ.

VIDEO

Facebook Comments

comments