ಶಾಸಕರಿಗೆ ಜನ ಪೆಟ್ಟು ಕೊಡೋದು ಮಾತ್ರ ಬಾಕಿ ಇದೆ – ಜನಾರ್ಧನ ಪೂಜಾರಿ

ಮಂಗಳೂರು ಜನವರಿ 24: ಕರ್ನಾಟಕ ರಾಜ್ಯ ರಾಜಕೀಯ ಕೊಳಕಾಗಿದ್ದು, ಎಲ್ಲರಿಗೂ ನಾನು ಮಾಡಿದ್ದೇ ಸರಿ ಎನ್ನುವ ಭಾವನೆ ಬಂದಿದ್ದು, ಅದಕ್ಕೆ ದಾರಿಯಲ್ಲಿ ಪೆಟ್ಟು ತಿಂದಿದ್ದಾರೆ. ಇನ್ನು ಜನ ಪೆಟ್ಟು ಕೊಡೊದು ಮಾತ್ರ ಬಾಕಿ ಇದೆ ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಶಾಸಕರ ಹೊಡೆದಾಟದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ರಾಜಕೀಯ ಕೊಳಕಾಗಿದ್ದು, ಶಾಸಕರೇ ಬಡಿದಾಡಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ ಎಂದು ಪರೋಕ್ಷವಾಗಿ ಶಾಸಕರಾದ ಆನಂದ್ ಸಿಂಗ್ ಮತ್ತು ಗಣೇಶ್ ಗಲಾಟೆಗೆ ಬೇಸರ ವ್ಯಕ್ತಪಡಿಸಿದರು.

ಇತ್ತೀಚಿನ ಬಿಕ್ಕಟ್ಟಿನಿಂದ ರಾಜ್ಯದ ಮೈತ್ರಿ ಸರಕಾರವನ್ನು ಉಳಿಸಿದ್ದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಲ್ಲ . ಮೈತ್ರಿ ಸರಕಾರ ಉಳಿದಿದ್ದೇ ಎಚ್ ಡಿ ಕುಮಾರ ಸ್ವಾಮಿ ಹಾಗು ದೇವೇಗೌಡರಿಂದ ಎಂದು ಹೇಳಿದ ಜನಾರ್ಧನ ಪೂಜಾರಿ, ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದಿದ್ದೇ ಪಕ್ಷವನ್ನು ಮುಗಿಸಲು ಎಂದು ಅವರು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು .

Facebook Comments

comments