Connect with us

LATEST NEWS

ಜಮ್ಮು-ಕಾಶ್ಮೀರದಲ್ಲೀಗ ಮೂರು ಭಾಷೆ ಅಧಿಕೃತ, ಕೇಂದ್ರದ ಸಚಿವ ಸಂಪುಟದಿಂದ ಅನುಮೋದನೆ!

ಹೊಸದಿಲ್ಲಿ: ಕಾಶ್ಮೀರಿ, ಡೋಂಗ್ರಿ, ಹಿಂದಿಯನ್ನು ಜಮ್ಮು-ಕಾಶ್ಮೀರದ ಅಧಿಕೃತ ಭಾಷೆಯಾಗಿ ಸೇರ್ಪಡಿಸಿ ಪರಿಗಣಿಸುವ ವಿಧೇಯಕ್ಕೆ ಸಂಪುಟ ಅನುಮೋದನೆ ನೀಡಿದೆ.

ಈಗಾಗಲೇ ಉರ್ದು ಮತ್ತು ಇಂಗ್ಲಿಷ್‌ ಕೇಂದ್ರಾಡಳಿತ ಪ್ರದೇಶದ ಅಧಿಕೃತ ಭಾಷೆಗಳಾಗಿದ್ದು, ಅದಕ್ಕೀಗ ಈ ಮೂರೂ ಭಾಷೆಗಳು ಸೇರ್ಪಡೆಯಾಗಲಿವೆ.
ಈ ಸಂಬಂಧ ಮುಂಬರುವ ಮುಂಗಾರು ಸಂಸತ್‌ ಅಧಿವೇಶನದಲ್ಲಿ ಜಮ್ಮು-ಕಾಶ್ಮೀರ ಅಧಿಕೃತ ಭಾಷೆಗಳ ವಿಧೇಯಕ-2020 ಮಂಡಿಸಲಾಗುವುದೆಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ್ದಾರೆ. ಈ ಮೂರೂ ಭಾಷೆಗಳನ್ನು ಜಮ್ಮು-ಕಾಶ್ಮೀರದ ಅಧಿಕೃತ ಭಾಷೆಗಳನ್ನಾಗಿಸಬೇಕೆಂದು ಅಲ್ಲಿನ ಸ್ಥಳೀಯರ ದಶಕಗಳ ಬೇಡಿಕೆಯಾಗಿತ್ತು. ಅದಕ್ಕೀಗ ಕೇಂದ್ರ ಸ್ಪಂದಿಸಿದಂತಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *