LATEST NEWS
ಗೂಗಲ್ ಮ್ಯಾಪ್ ನಂಬಿ ಗಲ್ಲಿಗೆ ನುಗ್ಗಿದ ಬಸ್ – 11 ಕೆವಿ ವಿದ್ಯುತ್ ತಂತಿ ತಗುಲಿ 11 ಮಂದಿ ಸಜೀವ ದಹನ
ರಾಜಸ್ಥಾನ : ತೀರ್ಥಯಾತ್ರೆಗೆ ತೆರಳಿದ್ದ ಬಸ್ ಗೆ 11 ಕೆವಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಬಸ್ ನಲ್ಲಿ 11 ಮಂದಿ ಸಾವನಪ್ಪಿದ ಘಟನೆ ರಾಜಸ್ಥಾನದ ಜಲೌರ್ ಮಹೇಶಪುರ ಗ್ರಾಮದಲ್ಲಿ ನಡೆದಿದೆ.
ಜೈನ ಸಮುದಾಯದ 36 ಜನರು ನಾಕೋಡ ತೀರ್ಥ ಕ್ಷೇತ್ರದ ದರ್ಶನ ಪಡೆದು ಅಜ್ಮೇರ್ ನತ್ತ ಪ್ರಯಾಣ ಬೆಳೆಸಿದ್ದರು. ರಾತ್ರಿ ಊಟದ ಬಳಿಕ ಚಾಲಕ ಗೂಗಲ್ ಮ್ಯಾಪ್ ಬಳಸಿ ಮಹೇಶಪುರ ಗ್ರಾಮದ ಸಂಕಲಿ ಗಲ್ಲಿಗಳ ಮೂಲಕ ಹೊರಟಿದ್ದನು. ಗ್ರಾಮದ ಇಕ್ಕಟ್ಟಾದ ರಸ್ತೆಯಲ್ಲಿ ಸಂಚರಿಸುತ್ತಿದ್ದರಿಂದ ಓರ್ವ ಬಸ್ ಮೇಲ್ಭಾಗದಲ್ಲಿ ಕೇಬಲ್, ವಿದ್ಯುತ್ ತಂತಿ ತಗುಲದಂತೆ ನೋಡಿಕೊಳ್ಳುತ್ತಿದ್ದಂತೆ ನೋಡಿಕೊಳ್ಳುತ್ತಿದ್ದನು. ಮೇಲೆ ನಿಂತಿದ್ದವನಿಗೆ ವಿದ್ಯುತ್ ಸ್ಪರ್ಶಗೊಂಡಿದ್ದರಿಂದ ಬಸ್ ಗೆ ಬೆಂಕಿ ತಗುಲಿತು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.
ಗಾಯಾಳುಗಳನ್ನು ಜಲೌರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನ ಜೋಧಪುರ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಕೆಲವರ ಗುರುತು ಪತ್ತೆಯಾಗಿದ್ದು, ಹಲವರ ಗುರುತು ಪತ್ತೆಯಾಗಿಲ್ಲ.