ಬೆಂಗಳೂರು ನವೆಂಬರ್ 15: ಕಲರ್ಸ್ ಕನ್ನಡದಲ್ಲಿ ನಡೆಯುತ್ತಿರುವ ಬಿಗ್ ಬಾಸ್ 6ನೇ ವಾರಕ್ಕೆ ಕಾಲಿಟ್ಟಿದೆ. ಈ ಬಾರಿಯ ಬಿಗ್ ಬಾಸ್ ಮೊದಲಿನ ಸೀಸನ್ ಗಳ ರೀತಿಯಲ್ಲಿ ಯಾವುದೇ ಹೈಪ್ ಕ್ರಿಯೆಟ್ ಮಾಡಿಲ್ಲ. ಇದೀಗ ಅದರೊಳಗಿರುವ ಸ್ಪರ್ದಿಗಳೇ ಚಾನೆಲ್ ಮೇಲೆ ಗಂಭೀರ ಆರೋಪಗಳು ಮಾಡುತ್ತಿದ್ದಾರೆ.

ಜಾಹ್ನವಿ ಈ ವಿಚಾರವನ್ನು ಹೇಳಿದ್ದು, ʻಕಲರ್ಸ್ ಕನ್ನಡʼ ವಾಹಿನಿಯಿಂದ ಸ್ಪಂದನಾ ಸೋಮಣ್ಣಗೆ ಪುಶ್ ಸಿಗುತ್ತಿದೆ. ರಾಶಿಕಾ-ಸೂರಜ್ದು ಏನೋ ಒಂದು ಟ್ರ್ಯಾಕ್ ನಡೆಯುತ್ತಿದೆ, ಹಾಗಾಗಿ ಚಾನೆಲ್ನವರು ಬಿಡಲ್ಲ ಅಂತ ಜಾಹ್ನವಿʼ ಹೇಳಿಕೊಂಡಿದ್ದು ಗೊತ್ತೇ ಇದೆ. ಇದರ ಜೊತೆಗೆ, ʻಸ್ಪಂದನಾ ಕಲರ್ಸ್ ಕೋಟಾ, ನನಗೆ ಮದುವೆ ಆಗಿ ಮಗು ಇದೆ ಯಾವುದು ಟ್ರ್ಯಾಕ್ ಇಲ್ಲ ʼ ಎಂದು ಜಾಹ್ನವಿ ಹೇಳಿದ್ದಾರೆ ಎಂದು ರಾಶಿಕಾ ಶೆಟ್ಟಿ ಓಪನ್ ಆಗಿ ಹೇಳಿಕೊಂಡಿದ್ದಾರೆ.
ರಿಷಾ ಜೊತೆಗೆ, “ನಾಮಿನೇಟ್ ಮತ್ತು ಸೇಫ್ ಮಾಡುವ ಟೈಮ್ನಲ್ಲಿ ಯಾಕೆ ಅಷ್ಟು ಟ್ರಿಗರ್ ಆದೆ ಅಂತ ಹೇಳ್ತೀನಿ – ಎಲ್ಲರೂ ಸುಧಿ ಅವರನ್ನ ಸೇವ್ ಮಾಡಿದ್ರು. ಫಸ್ಟ್ ಆಫ್ ಆಲ್ ವೀಕ್ ಆಗಿರುವವರನ್ನ ಸೇವ್ ಮಾಡಬಾರದು. ಸ್ಟ್ರಾಂಗ್ ಆಗಿ ಇರುವವರು, ಚೆನ್ನಾಗಿ ಆಟ ಆಡುವವರನ್ನ ಕಳುಹಿಸಬೇಕಿತ್ತು. ನನಗೆ ಮೊದಲು ವೀಕ್ ಅಂತ ಕಾಣಿಸಿಕೊಂಡಿದ್ದೆ ಸ್ಪಂದನಾ. ಇಲ್ಲಿ ಒಂದು ಪಾಯಿಂಟ್ ಹುಟ್ಟುಕೊಳ್ಳುತ್ತೆ – ಕಲರ್ಸ್ ಅವರೇ ಸ್ಪಂದನಾ ಅವರನ್ನ ಸೇವ್ ಮಾಡಿಬಿಡ್ತಾರೆ ಅಂತ. ಆಗ ಹೌದು ಅಲ್ವಾ? ಜಾಹ್ನವಿ ಅವರು ಇದೇ ಚಾನೆಲ್ನಲ್ಲಿ ಕೆಲಸ ಮಾಡಿರುವುದರಿಂದ ಅವರಿಗೆ ಗೊತ್ತಿರುತ್ತೆ ಅಂತ ಅವರ ಮಾತನ್ನ ಗೌರವಿಸಿದೆ” ಎಂದು ರಾಶಿಕಾ ಹೇಳಿಕೊಂಡಿದ್ದಾರೆ.
“ನಿನ್ನ ಮತ್ತು ಸೂರಜ್ದು ಒಂದು ಟ್ರ್ಯಾಕ್ ನಡೀತಾ ಇದೆ, ನಿಮ್ಮಿಬ್ಬರನ್ನು ತೆಗೆಯಲ್ಲ. ಆದರೆ, ನನಗೆ ಮದುವೆ ಆಗಿದೆ, ಮಗು ಇದೆ. ನನ್ನದೇನು ಟ್ರ್ಯಾಕ್ ಇಲ್ಲ, ಹಾಗಾಗಿ ನನ್ನನ್ನ ಕಳಿಸಿಬಿಡ್ತಾರೆ ಅಂತ ಜಾಹ್ನವಿ ಹೇಳಿದ್ದರು” ಎಂದಿದ್ದಾರೆ ರಾಶಿಕಾ.