ಮುಂಬೈ ಡಿಸೆಂಬರ್ 19: ಖ್ಯಾತ ಹಿಂದಿ ಹಾಸ್ಯ ನಟಿ ಭಾರ್ತಿ ಸಿಂಗ್ ಗೆ ಎರಡನೇ ಮಗು ಜನನವಾಗಿದೆ. ಇಂದು ಮುಂಜಾನೆ ಶೂಟಿಂಗ್ ಗೆ ತೆರಳುತ್ತಿರುವ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಮುಂಜಾನೆ ಆಸ್ಪತ್ರೆಗೆ ದಾಖಲಾಗಿದ್ದ ಭಾರ್ತಿ ಸಿಂಗ್‌ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.


ಭಾರ್ತಿ ಸಿಂಗ್‌ ಬೆಳಗ್ಗೆ ಲಾಫ್ಟರ್ ಚೆಫ್ಸ್ ಎಂಬ ಟಿವಿ ಶೋ ಕಾರ್ಯಕ್ರಮದ ಚಿತ್ರೀಕರಣಕ್ಕೆ ಹೋಗಬೇಕಿತ್ತು. ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಮ್ಮ 2ನೇ ಮಗುವಿಗೆ ಜನ್ಮ ನೀಡಿದ್ದಾರೆ.


ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ರಜೆಯ ಸಮಯದಲ್ಲಿದ್ದಾಗ ಎರಡನೇ ಮಗುವಿಗೆ ತಂದೆ-ತಾಯಿ ಆಗುತ್ತಿರುವ ಶುಭ ಸುದ್ದಿಯನ್ನು ದಂಪತಿ ಹಂಚಿಕೊಂಡಿದ್ದರು. ಕೆಲವು ವಾರಗಳ ಹಿಂದಷ್ಟೇ ಹಾಸ್ಯನಟಿ ಬೇಬಿ ಬಂಪ್‌ ಫೋಟೋಶೂಟ್‌ ಮಾಡಿಸಿದ್ದರು. ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಹರ್ಷ್ ಮತ್ತು ಭಾರ್ತಿ 2022 ರಲ್ಲಿ ತಮ್ಮ ಮೊದಲ ಮಗುವಾದ ಮಗ ಲಕ್ಷ್ಯನನ್ನು ಸ್ವಾಗತಿಸಿದ್ದರು

Share Information