LATEST NEWS
ಮಂಗಳೂರಿನ ಭಾರತ್ ಬೀಡಿ, ಭಾರತ್ ಮೋಟಾರ್ಸ್ ಮೇಲೆ ಐಟಿ ರೈಡ್
ಮಂಗಳೂರಿನ ಭಾರತ್ ಬೀಡಿ, ಭಾರತ್ ಮೋಟಾರ್ಸ್ ಮೇಲೆ ಐಟಿ ರೈಡ್
ಮಂಗಳೂರು ಫೆ.26: ಮಂಗಳೂರಿನಲ್ಲಿ ಇಂದು ಬೆಳಿಗ್ಗೆಯಿಂದಲೇ ಐಟಿ ಅಧಿಕಾರಿಗಳು ಭಾರತ್ ಉದ್ಯಮ ಸಮೂಹ ಸಂಸ್ಥೆಗಳ ದಾಳಿ ನಡೆಸಿದ್ದಾರೆ. ಮಂಗಳೂರಿನ ವಿವಿಧ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಭಾರತ್ ಮೋಟಾರ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಮಂಗಳೂರು, ಕಾಞಂಗಾಡ್ ಸೇರಿ ವಿವಿಧೆಡೆ ಇರುವ ಭಾರತ್ ಬೀಡಿ ಕಚೇರಿ ಮೇಲೆಯೂ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಮಂಗಳೂರು, ಉಡುಪಿ, ಬೆಂಗಳೂರಿನಲ್ಲಿ ಭಾರತ್ ಮೋಟಾರ್ಸ್ ಉದ್ಯಮವಿದೆ. ವಿವಿಧ ಬ್ರಾಂಡ್ ಗಳ ಕಾರು ಡೀಲರ್ ಶಿಪ್ ಹೊಂದಿರುವ ಭಾರತ್ ಮೋಟಾರ್ಸ್ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.
You must be logged in to post a comment Login