Connect with us

LATEST NEWS

ಗಾಜಾ ಪರಿಸ್ಥಿತಿ ನಿಮಗೂ ಬರಲಿದೆ – ಲೆಬನಾನ್ ಗೆ ಇಸ್ರೇಲ್ ಪ್ರಧಾನಿ ವಾರ್ನಿಂಗ್

ಜೆರುಸಲೇಂ ಅಕ್ಟೋಬರ್ 09: ಲೆಬನಾನ್ ನಲ್ಲಿರುವ ಹಿಜ್ಬುಲ್ಲಾ ವಿರುದ್ದ ದಾಳಿ ಮುಂದುವರೆಸಿರುವ ಇಸ್ರೇಲ್ ಇದೀಗ ಲೆಬನಾನ್ ಗೆ ವಾರ್ನಿಂಗ್ ಕೊಟ್ಟಿದ್ದು, ಗಾಜಾದಂತಹ ವಿನಾಶಕಾರಿ ಪರಿಸ್ಥಿತಿ ಎದುರಾಗಲಿದೆ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಎಚ್ಚರಿಸಿದ್ದಾರೆ.


ಲೆಬನಾನ್‌ ಕರಾವಳಿಯ ದಕ್ಷಿಣ ಭಾಗದಲ್ಲಿ ಹಿಜ್ಬುಲ್ಲಾದ ವಿರುದ್ಧ ಭೂ ಕಾರ್ಯಾಚರಣೆಯನ್ನು ಇಸ್ರೇಲ್ ತೀವ್ರಗೊಳಿಸಿದೆ. ಪ್ರದೇಶದಲ್ಲಿ ಹೆಚ್ಚಿನ ಸೇನೆಯನ್ನು ನಿಯೋಜಿಸಿರುವ ಇಸ್ರೇಲ್, ನಾಗರಿಕರು ಸ್ಥಳಾಂತರ ಮಾಡುವಂತೆ ಕರೆ ನೀಡಿದೆ.

‘ಗಾಜಾದಂತಹ ವಿನಾಶಕಾರಿ ಸ್ಥಿತಿ ಎದುರಾಗುವ ಮುನ್ನ ನಿಮಗೆ ಲೆಬನಾನ್ ಅನ್ನು ಉಳಿಸುವ ಅವಕಾಶವಿದೆ. ಯುದ್ಧವನ್ನು ಕೊನೆಗೊಳಿಸಲು ನಿಮ್ಮ ದೇಶವನ್ನು ಹಿಜ್ಬುಲ್ಲಾದಿಂದ ಮುಕ್ತಗೊಳಿಸಿ ಎಂದು ಲೆಬನಾನಿನ ಜನರಿಗೆ ನೆತನ್ಯಾಹು ಕರೆ ನೀಡಿದ್ದಾರೆ. ಹಾಗೆ ಮಾಡದಿದ್ದರೆ ನಿಮ್ಮ ಜನನಿಬಿಡ ಪ್ರದೇಶಗಳಿಂದ ಇಸ್ರೇಲ್ ವಿರುದ್ಧ ಹೋರಾಡಲು ಹಿಜ್ಬುಲ್ಲಾ ಯತ್ನಿಸಲಿದೆ. ಇದು ಸುದೀರ್ಘ ಯುದ್ಧಕ್ಕೆ ಹೇತುವಾಗಲಿದೆ’ ಎಂದು ಎಚ್ಚರಿಸಿದ್ದಾರೆ. ಈ ಮೊದಲು ಇಸ್ರೇಲ್‌ನ ಬಂದರು ನಗರಿ ಹೈಫಾ ಗುರಿಯಾಗಿಸಿ ರಾಕೆಟ್ ದಾಳಿ ನಡೆಸಲಾಗಿದೆ ಎಂದು ಹಿಜ್ಬುಲ್ಲಾ ಸಂಘಟನೆ ಹೇಳಿದೆ. ಲೆಬನಾನಿನ ಜನನಿಬಿಡ ಪ್ರದೇಶಗಳ ಮೇಲೆ ದಾಳಿ ಮುಂದುವರಿದರೆ ಇಸ್ರೇಲ್ ನಗರಗಳ ಮೇಲೆ ಮತ್ತಷ್ಟು ರಾಕೆಟ್ ದಾಳಿ ನಡೆಸುವುದಾಗಿಯೂ ಎಚ್ಚರಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *