Connect with us

    BANTWAL

    ನಾನು ಪೂಜಾರಿಯವರನ್ನು ಬೈದ ವಿಡಿಯೋ ಎಲ್ಲಾದರೂ ಬಂದಿದೆಯಾ – ರಮಾನಾಥ ರೈ

    ನಾನು ಪೂಜಾರಿಯವರನ್ನು ಬೈದ ವಿಡಿಯೋ ಎಲ್ಲಾದರೂ ಬಂದಿದೆಯಾ – ರಮಾನಾಥ ರೈ

    ಬಂಟ್ವಾಳ ಡಿಸೆಂಬರ್ 30: ಕಾಂಗ್ರೇಸ್ ನ ಹಿರಿಯ ನಾಯಕ ಬಿ. ಜನಾರ್ಧನ ಪೂಜಾರಿ ಅವರು ಕಾರ್ಯಕ್ರಮವೊಂದರಲ್ಲಿ ಉಸ್ತುವಾರಿ ಸಚಿವ ರಮಾನಾಥ ರೈ ಅವರು ತಮ್ಮ ತಾಯಿಯನ್ನು ಅವಮಾನಿಸಿದ್ದಾರೆ ಎಂಬ ಆರೋಪದ ಬಗ್ಗೆ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಪ್ರತಿಕ್ರಿಯಿಸಿದ್ದಾರೆ.

    ಬಿ.ಸಿ ರೋಡ್ ನ ರಮಾನಾಥ ರೈ ಅವರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಿರಿಯ ಕಾಂಗ್ರೆಸ್‌ ನಾಯಕ ಬಿ.ಜನಾರ್ದನ ಪೂಜಾರಿ ಅವರ ಕುರಿತು ನನಗೆ ಅಪಾರ ಗೌರವವಿದೆ. ಅವರ ಕುರಿತು ನಾನು ಏನೂ ಮಾತನಾಡಿಲ್ಲ ಎಂದು ಹೇಳಿದರು. ಇತ್ತೀಚೆಗೆ ಸಮಾರಂಭ ಒಂದರಲ್ಲಿ ಪೂಜಾರಿಯವರೊಂದಿಗೆ ನಾನು ಮಾತನಾಡಿದ್ದೆ ಎಂದು ತಿಳಿಸಿದ ಅವರು ಪೂಜಾರಿ ಅವರ ಮೇಲೆ ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.

    ಅವರ ವಿರುದ್ದ ನಾನು ಏನೂ ಮಾತನಾಡಿಲ್ಲ ಎಂದು ಹೇಳಿದ ರಮನಾಥ ರೈ ಅವರು ಜನಾರ್ಧನ ಪೂಜಾರಿ ಅವರನ್ನು ದಾರಿ ತಪ್ಪಿಸುವವರಿದ್ದಾರೆ ಎಂದು ಆರೋಪಿಸಿದರು. ನಾನು ಪೂಜಾರಿಯವರನ್ನು ಬೈದ ವಿಡಿಯೋ ಎಲ್ಲಾದರೂ ಬಂದಿದೆಯಾ ಎಂದು ಪ್ರಶ್ನಿಸಿದರು. ಇದು ನನ್ನ ಮತ್ತು ಪೂಜಾರಿಯವರ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಠಿಸಲು ಮಾಡಿದ ಹುನ್ನಾರ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply