ಟೆಹ್ರಾನ್ ,ಮಾರ್ಚ್ 1: ಇಸ್ರೇಲ್ ಹಾಗೂ ಅಮೆರಿಕ ಜಂಟಿ ಕ್ಷಿಪಣಿ ದಾಳಿಯಲ್ಲಿ ಹತ್ಯೆಯಾದ ಇರಾನ್ ಸರ್ವೋಚ್ಛ ನಾಯಕನ ಆಯತೊಲ್ಲ ಅಲ್ ಖಮೆನಿ ಸಾವನ್ನು ಸಂಭ್ರಮಿಸಿದ ಇರಾನ್ ನ ಮಹಿಳೆಯರು ಸಂಭ್ರಮಿಸಿದ್ದಾರೆ.

ಈ ಕುರಿತು ಹುಡುಗಿಯೊಬ್ಬಳು ಪೋಸ್ಟ್ ಮಾಡಿದ್ದು ಇರಾನ್ ಮುಕ್ತವಾಗುತ್ತಿದೆ, ಸ್ವಾತಂತ್ರವಾಗುತ್ತಿದೆ, ಇದು ಅತ್ಯಂತ ಸಂತೋಷದಾಯಕ ದಿನ ಎಂದು ಬರೆದುಕೊಂಡಿದ್ದಾಳೆ. ಮತ್ತೊಬ್ಬ ಇರಾನಿ ಮಹಿಳೆ ಖಮೇನಿ ಈಸ್ ಡೆಡ್ ಎಂದು ಕೂಗುತ್ತಾ ಮಹಿಳೆ ಸಂತೋಷ ವ್ಯಕ್ತಪಡಿಸಿದ್ದಾಳೆ. ಕಣ್ಣೀರು ಹಾಕುತ್ತಾ ರಸ್ತೆಯಲ್ಲಿ ಓಡಾಡುವ ಇರಾನ್ ಪ್ರಜೆಗಳಿಗೆ ಖಮೇನಿ ಈಸ್ ಡೆಡ್ ಅಂತಾ ಕೂಗಿ ಹೇಳಿ ಥ್ಯಾಂಕ್ಸ್ ಅಮೆರಿಕ ಅಂತಾ ಆನಂದಭಾಷ್ಪ ಸುರಿಸಿದ್ದಾಳೆ. ಮತ್ತೊಂದು ಹುಡುಗಿ ಡ್ಯಾನ್ಸ್ ಮಾಡಿ ಖಮೇನಿ ಸಾವನ್ನು ಸಂಭ್ರಮಿಸಿದ್ದಾಳೆ.
ಸಭೆ ನಡೆಸುತ್ತಿದ್ದಾಗಲೇ ಖಮೇನಿಯನ್ನು ಹತ್ಯೆ ಮಾಡಲಾಗಿದೆ. ಜಂಟಿ ಮಿಸೈಲ್ ದಾಳಿಯಲ್ಲಿ ಖಮೇನಿ ಮಾತ್ರವಲ್ಲದೇ ಅವರ ಮಗಳು ಮತ್ತು ಮೊಮ್ಮಕ್ಕಳು ಕೂಡ ಸಾವನ್ನಪ್ಪಿರುವುದು ಖಚಿತವಾಗಿದೆ.

ಖಮೇನಿ ತನ್ನ ಉನ್ನತ ಸಹಾಯಕರೊಂದಿಗೆ ಸಭೆ ನಡೆಸುತ್ತಿದ್ದರು. ರಾಷ್ಟ್ರೀಯ ಭದ್ರತಾ ಮಂಡಳಿಯ ಮಾಜಿ ಕಾರ್ಯದರ್ಶಿ ಅಲಿ ಶಮ್ಖಾನಿ ಮತ್ತು ಐಆರ್ಜಿಸಿ ಕಮಾಂಡರ್ ಮೊಹಮ್ಮದ್ ಪಾಕ್ಪೂರ್ ಜೊತೆ ಸಭೆ ನಡೆಯುತ್ತಿತ್ತು. ಈ ವೇಳೆ ಇಸ್ರೇಲ್ ದಾಳಿ ನಡೆಸಿದೆ. ದಾಳಿಯ ಸಂದರ್ಭ ಖಮೇನಿ ಶಮ್ಖಾನಿ ಮತ್ತು ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ ಅವರೊಂದಿಗೆ ಕುಳಿತಿದ್ದರು ಎಂದು ವರದಿಗಳು ತಿಳಿಸಿವೆ.
ಈ ಬೆಳವಣಿಗೆ ಬಳಿಕ ಇರಾನ್ ದೇಶಾದ್ಯಂತ 40 ದಿನಗಳ ಶೋಕಾಚರಣೆ ಘೋಷಿಸಿದೆ. ಆದರೆ ಇರಾನ್ನ ಮಹಿಳೆಯರು ಮಾತ್ರ ಖಮೇನಿ ಸಾವನ್ನು ಸಂಭ್ರಮಿಸುತ್ತಿದ್ದಾರೆ. ಇಸ್ಲಾಂ ಮೂಲಭೂತವಾದದ ಕಟ್ಟಾ ಪ್ರತಿಪಾದಕನಾಗಿರುವ ಆಯಾತೊಲ್ಲ ಅಲಿ ಖಮೇನಿಯನ್ನು ಪದಚ್ಯುತಿಗೊಳಿಸಿ ಸರ್ವಾಧಿಕಾರ ಅಂತ್ಯಗೊಳಿಸಿ, ಇರಾನ್ ನಲ್ಲಿ ಹೊಸ ಸರ್ಕಾರ ರಚಿಸುವುದು ಇಸ್ರೇಲ್ ಪ್ರಧಾನಿಯ ಉದ್ದೇಶವಾಗಿತ್ತು. ಆಯಾತೋಲ್ಲ ಸ್ಥಾನದಲ್ಲಿ ಇರಾನ್ ಯುವರಾಜ ರೇಜಾ ಪೆಹಲ್ವಿಯನ್ನ ಕೂರಿಸಲು ಇಸ್ರೇಲ್ ನಿರ್ಧಾರ ಮಾಡಿತ್ತು.
1979 ರಲ್ಲಿ ಜರುಗಿದ ಆಡಳಿತ ಕ್ರಾಂತಿಯಲ್ಲಿ ಇರಾನ್ ರಾಜ ಮನೆತನದ ಹಿಡಿತವನ್ನ ಖಮೇನಿ ತಪ್ಪಿಸಿದ್ದರು. ಮತ್ತೆ ಇರಾನ್ನನ್ನು ರಾಜಮನೆತನದ ಸುಪರ್ಧಿಗೆ ಒಪ್ಪಿಸಲು ಇಸ್ರೇಲ್ ಪಣ ತೊಟ್ಟಿತ್ತು. ಇದಕ್ಕಾಗಿ ಇಸ್ರೇಲ್ – ಅಮೆರಿಕ ಜೊತೆಗೆ ಕೈಜೋಡಿಸಿ ಈ ರಣತಂತ್ರ ರೂಪಿಸಿತ್ತು.