Connect with us

    DAKSHINA KANNADA

    ಐಪಿಎಲ್‌ ಕ್ರಿಕೆಟ್ ಬೆಟ್ಟಿಂಗ್‌ ದಂಧೆ : ಆರು ಆರೋಪಿಗಳ ಬಂಧನ

    ಮಂಗಳೂರು, ಮೇ 04 : ಐಪಿಎಲ್‌ ಕ್ರಿಕೆಟ್ ಆಟಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್‌ ನಡೆಸಿ ಅಕ್ರಮವಾಗಿ ಹಣ ಸಂಪಾದನೆಯಲ್ಲಿ ತೊಡಗಿಸಿಕೊಂಡಿದ್ದ  ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ವಿಕ್ರಂ ಕುಂಪಲ, ಧನಪಾಲ್ ಶೆಟ್ಟಿ ಕೃಷ್ಣಾಪುರ, ಕಮಲೇಶ್ ಸುರತ್ಕಲ್, ಹರೀಶ್ ಶೆಟ್ಟಿ, ಪ್ರೀತೆಶ್ ಆಲಿಯಾಸ್ ಪ್ರೀತಮ್ ಅಶೋಕ್ ನಗರ, ಅವಿನಾಶ್ ಉರ್ವ ಮಾರಿಗುಡಿ ಎಂದು ಗುರುತ್ತಿಸಲಾಗಿದೆ.

    ಇವರು ಕ್ರಿಕೆಟ್‌ ಬೆಟ್ಟಿಂಗ್ ಮೊಬೈಲ್ ಆಪ್‍ಗಳಾದ ಸ್ಟಾರ್ ಆಪ್ ಮತ್ತು ಲೋಟಸ್ ಬುಕ್ 247 ಬೆಟ್‍ಗಳಲ್ಲಿ ಬೇರೆಯವರ ಹೆಸರಿನಲ್ಲಿ ಮಂಗಳೂರು ನಗರದ ಆಕ್ಸಿಸ್ ಬ್ಯಾಂಕ್, ಕಣಾರ್ಟಕ ಬ್ಯಾಂಕ್, ಎಚ್‍ಡಿಎಫ್‍ಸಿ ಬ್ಯಾಂಕ್ ಖಾತೆಗಳನ್ನು ತೆರೆದು ಬಳಿಕ ಅವರುಗಳ ಖಾತೆಗೆ ಬಾಜಿದಾರರಿಂದ ಆನ್ ಲೈನ್ ಮೂಲಕ ಬೆಟ್ಟಿಂಗ್ ಹಣವನ್ನು ಸಂಗ್ರಹಿಸಿ ಮೋಸದಿಂದ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಈ ಪ್ರಕರಣದಲ್ಲಿ ಸುಮಾರು 20 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿ ಸುಮಾರು 20 ಲಕ್ಷ ರೂ ಹಾಗೂ 3 ಲಕ್ಷ ನಗದು ಮತ್ತು ಆನ್‍ಲೈನ್ ಗೇಮ್ ಸಲುವಾಗಿ ಉಪಯೋಗಿಸುತ್ತಿದ್ದ 10 ಮೊಬೈಲ್ ಫೋನ್  ಗಳನ್ನು ವಶಕ್ಕೆ ಪಡೆದು ಕ್ರಮಕೈಗೊಳ್ಳಲಾಗಿದೆ.

    ಮಂಗಳೂರು ನಗರದ ಉಪ-ಪೊಲೀಸ್ ಆಯುಕ್ತರಾದ ಹರಿರಾಂ ಶಂಕರ್ ಮತ್ತು ವಿನಯ ಗಾಂವಕರ್ ರವರ ನಿರ್ದೆಶನದಂತೆ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಸಿಬ್ಬಂದಿ ಹಾಗೂ ಇಕೋನಾಮಿಕ್ ಮತ್ತು ನಾರ್ಕೊಟಿಕ್ ಕ್ರೈಂ ಠಾಣೆಯ ಪಿಎಸ್‍ಐ ಸತೀಶ್ ಎಂ ಪಿ ಹಾಗೂ ಸಿಬ್ಬಂದಿಯವರು ಈ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್ ಶಶಿ ಕುಮಾರ್ ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply