Connect with us

    LATEST NEWS

    ಖಾಸಗಿ ಬೋಟ್ ನಲ್ಲಿ ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸಿ ಧ್ವಜಕ್ಕೆ ಅವಮಾನ

    ಖಾಸಗಿ ಬೋಟ್ ನಲ್ಲಿ ರಾಷ್ಟ್ರ ಧ್ವಜವನ್ನು ಉಲ್ಟಾ ಹಾರಿಸಿ ಧ್ವಜಕ್ಕೆ ಅವಮಾನ

    ಮಂಗಳೂರು ಮೇ.10: ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ರಾಷ್ಟ್ರ ಧ್ವಜವನ್ನೇ ತಲೆಕೆಳಗಾಗಿ ಹಾರಿಸಿ ಭಂಡತನ ಮೆರೆದಿದ್ದಾನೆ.ಉಳ್ಳಾಲ ನೇತ್ರಾವತಿ ನದಿ ತಟದ ನಿವಾಸಿಯೊಬ್ಬ ತನ್ನ ಖಾಸಗಿ ಬೋಟ್ ನಲ್ಲಿ ರಾಷ್ಟ್ರಧ್ವಜವನ್ನು ಬೇಕಾಬಿಟ್ಟಿಯಾಗಿ ಹಾರಿಸಿ ಅವಮಾನಿಸಿದ್ದಾನೆ.

    ಖಾಸಗಿ ಶಿಪ್ ಒಂದರಲ್ಲಿ ಕ್ಯಾಪ್ಟನ್ ಆಗಿದ್ದ ಈ ವ್ಯಕ್ತಿ ಸದ್ಯ ನಿವೃತ್ತಿ ಆಗಿದ್ದಾನೆ. ಆದ್ರೆ ಈತ ತನ್ನ ಖಾಸಗಿ ಸಂಚಾರಕ್ಕೆ ಸ್ಪೀಡ್ ಬೋಟ್ ಒಂದನ್ನು ಇಲ್ಲಿ ಉಪಯೋಗಿಸುತ್ತಿದ್ದು, ಆ ಬೋಟ್ ನಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸುತ್ತಾ ಸಂಚಾರ ನಡೆಸುತ್ತಿದ್ದ.

    ಈ ಬಗ್ಗೆ ಸ್ಥಳೀಯರು ಆತನ ಗಮನಕ್ಕೆ ತಂದರು ಸಹ ನಾನು ಇದೇ ರೀತಿ ಧ್ವಜ ಹಾರಿಸುವುದು ನೀವು ಏನಾದರೂ ಮಾಡಿಕೊಳ್ಳಿ ಎಂದು ಉದ್ದಟತನ ಮೆರೆದಿದ್ದಾನೆ. ಹೀಗಾಗಿ ಭಾರತದ ರಾಷ್ಟ್ರಧ್ವಜಕ್ಕೆ‌ ಅವಮಾನ ಮಾಡಿದ್ದ ಈ ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply