ಮಂಗಳೂರು, ಜನವರಿ 23: ತಮ್ಮ ವಿಭಿನ್ನ ಶೈಲಿಯ ವಿಡಿಯೋಗಳಿಂದ ಕರಾವಳಿಯಲ್ಲಿ ಹವಾ ಸೃಷ್ಠಿಸಿದ ಆಶಾ ಪಂಡಿತ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಶಿಷ್ಟ ಶೈಲಿಯಲ್ಲಿ ಬೈಗುಳದ ವಿಡಿಯೋದಿಂದಲೇ ಪ್ರಸಿದ್ದಿ ಹೊಂದಿದ್ದ ಅವರು ತುಳು ರಂಗಭೂಮಿಯಲ್ಲೂ ಕೆಲಸ ಮಾಡಿದ್ದರು. ಸಾಮಾಜಿಕ ತಾಣದಲ್ಲಿ ಆಶಾ ಅಕ್ಕ ಎಂದೇ ಸುದ್ದಿಯಾಗುತ್ತಿದ್ದರು. ಆಶಾ ಪಂಡಿತ್ ಅಳಪೆ ಬಳಿ ಸಣ್ಣ ಕ್ಯಾಂಟೀನ್ ಒಂದನ್ನು ನಡೆಸುತ್ತಿದ್ದರು. Instagram ನಲ್ಲಿ ಸುಮಾರು 27 ಸಾವಿರ ಫಾಲೋವರ್ಸ್ ನ್ನು ಹೊಂದಿದ್ದರು.
ಕುಟುಂಬದ ಮೂಲಗಳ ಪ್ರಕಾರ, ಅವರಿಗೆ ನಿನ್ನೆ ರಾತ್ರಿ ವಾಂತಿ ಸಮಸ್ಯೆ ಉಂಟಾಗಿತ್ತು. ಶುಕ್ರವಾರ ಬೆಳಗಿನ ಜಾವ ಅವರಿಗೆ ಹೃದಯಾಘಾತವಾಗಿ ಮನೆಯ ಅಂಗಳದಲ್ಲಿ ಕುಸಿದು ಬಿದ್ದರು ಎಂದು ವರದಿಯಾಗಿದೆ. ಅವರನ್ನು ಆಸ್ಪತ್ರೆಗೆ ಸಾಗಿಸುವ ಹೊತ್ತಿಗೆ, ಆಕೆ ಆಗಲೇ ಮೃತಪಟ್ಟಿದ್ದರು ಎಂದು ವರದಿಯಾಗಿದೆ.



