Connect with us

LATEST NEWS

ಮೊಬೈಲ್ ಇಯರ್ ಪೋನ್ ವೈರ್ ನಿಂದ ತನ್ನ ನವಜಾತ ಶಿಶುವನ್ನು ಕೊಲೆಗೈದ ಪಾಪಿ ತಾಯಿ

ಕಾಸರಗೋಡು : ಮೊದಲ ಮಗುವಾದ ಕೂಡಲೇ ಇನ್ನೊಂದು ಮಗು ಆದ ಕಾರಣಕ್ಕೆ ನವಜಾತ ಶಿಶುವನ್ನು ಪಾಪಿ ತಾಯಿಯೊಬ್ಬಳು ಇಯರ್ ಫೋನ್ ವೈರ್‍ನಿಂದ ಬಿಗಿದು ಕೊಲೆಗೈದ ಘಟನೆ ಕಾಸರಗೋಡಿನ ಬದಿಯಡ್ಕದಲ್ಲಿ ನಡೆದಿದೆ.


ಪಾಪಿ ತಾಯಿಯನ್ನು ಶಾಹಿನಾ ಎಂದು ಗುರುತಿಸಲಾಗಿದ್ದು, ಈಕೆ ಚೆದಕ್ಕೋಲ್ ನಿವಾಸಿ. ಘಟನೆಗೆ ಸಂಬಂಧಿಸಿದಂತೆ ಸದ್ಯ ಪಾಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. 2020ರ ಡಿಸೆಂಬರ್ 15ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಹಿನಾ ಮೊದಲ ಮಗುವಾದ ಕೂಡಲೇ ಮತ್ತೆ ಗರ್ಭಿಣಿಯಾಗಿದ್ದಳು, ಅಲ್ಲದೆ ಈಕೆ ಗರ್ಭಿಣಿಯಾಗಿರುವುದು ಆಕೆಯ ಪತಿ ಕುಟುಂಬಸ್ಥರಿಗೆ ತಿಳಿದಿರಲಿಲ್ಲ. ಡಿಸೆಂಬರ್ ನಲ್ಲಿ ಶಾಹಿನಾಗೆ ತೀವ್ರ ರಕ್ತಸ್ರಾವ ಉಂಟಾದ ಕಾರಣ ಆಸ್ಪತ್ರೆಗೆ ದೌಡಾಯಿಸಿದ್ದಳು. ಈ ವೇಳೆ ಪರೀಕ್ಷೆ ನಡೆಸಿದ್ದು, ಕೆಲವೇ ಗಂಟೆಗಳಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ.

ಮಗು ಹೆತ್ತರೂ ಮಾಹಿತಿ ಸಿಗದ ಕಾರಣ ಶಾಹಿನಾ ಕುಟುಂಬಸ್ಥರು ಮನೆಯಲ್ಲಿ ಹುಡುಕಾಡಿದಾಗ ಮಗುವಿನ ಮೃತದೇಹ ಸಿಕ್ಕಿದೆ. ಮಂಚದ ಕೆಳಗೆ ಬಟ್ಟೆಯಿಂದ ಸುತ್ತಿದ್ದ ರೀತಿಯಲ್ಲಿ ಮಗುವಿನ ದೇಹ ಪತ್ತೆಯಾಗಿದೆ.
ಈಗಾಗಲೇ ಮೊದಲ ಮಗು ಇರುವ ಹಿನ್ನಲೆ ಡಿಸೆಂಬರ್ 15ರಂದು ಮಗು ಹುಟ್ಟಿದ ಕೂಡಲೇ ಅದನ್ನು ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ. ಇತ್ತ ಮಗುವಿನ ಮೃತದೇಹವನ್ನು ಕಣ್ಣೂರಿನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ವರದಿಯಲ್ಲಿ ಮಗುವನ್ನು ದಪ್ಪವಾದ ಕೇಬಲ್ ನಿಂದ ಬಿಗಿದು ಕೊಲೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ತಾಯಿಯನ್ನು ವಿಚಾರಣೆ ನಡೆಸಿದಾಗ ಆಕೆ ಮೊಬೈಲ್ ಇಯರ್ ಫೋನ್ ವೈರ್ ಬಳಸಿ ಹತ್ಯೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾಳೆ

Facebook Comments

comments