ನವದೆಹಲಿ ನವೆಂಬರ್ 21: ಸ್ಟ್ಯಾಂಡಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಮತ್ತು ಭಾರತೀಯ ರೈಲ್ವೆ ಇಲಾಖೆಯ ನಡುವೆ ಸೋಶಿಯಲ್ ಮಿಡಿಯಾ ವಾರ್ ನಡೆದಿದೆ. ರೈಲ್ವೆ ಇಲಾಖೆಯ ಕುರಿತಂತೆ ಕಾಮಿಡಿಯನ್ ಕುನಾಲ್ ಕಾಮ್ರಾ ಮಾಡಿರುವ ವಿಡಿಯೋಗೆ ಪ್ಯಾಕ್ಟ್ ಚೆಕ್ ಮಾಡಲು ಹೋಗಿ ರೈಲ್ವೆ ಇಲಾಖೆ ಪೇಚಿಕೆ ಸಿಕ್ಕಿಬಿದ್ದಿದೆ. ಸದ್ಯ ರೈಲ್ವೆ ಇಲಾಖೆಯು ‘ಫ್ಯಾಕ್ಟ್‌ಚೆಕ್‌’ ವಿಭಾಗ ನೀಡಿದ ಉತ್ತರ ಈಗ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.


ಕುನಾಲ್ ಕಾಮ್ರಾ ಭಾರತೀಯ ರೈಲ್ವೆಯ ಕುರಿತಂತೆ ವಿಡಿಯೋ ಒಂದನ್ನು ಯುಟ್ಯೂಬನ್ ನಲ್ಲಿ ಅಪ್ಲೋಡ್ ಮಾಡಿದ್ದರು. ಅದರಲ್ಲಿ ರೈಲು ಅಪಘಾತದಲ್ಲಿ ನಡೆದ ಸಾವುಗಳ ಕುರಿತು , ಹಾಗೂ ರೈಲ್ವೆ ಕೆಲಸಗಳ ಕುರಿತಂತೆ ಮಾಹಿತಿ ಹೇಳಿದ್ದರು. ಈ ವಿಡಿಯೋ ವೈರಲ್ ಆದ ಬಳಿಕ ರೈಲ್ವೆ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಕುನಾಲ್ ಕಾಮ್ರಾದ ವಿಡಿಯೋದಲ್ಲಿರುವ ಮಾಹಿತಿ ಸುಳ್ಳು ಎಂದು ಹೇಳಿತ್ತು, ಅದಕ್ಕೆ ಮರು ಉತ್ತರಿಸಿದ್ದ ಕಾಮಿಡಿಯನ್ ಕುನಾಲ್ ಕಾಮ್ರಾ ನಿಜ ಮಾಹಿತಿ ಹೇಳಿ ಎಂದು ಕೇಳಿದ್ದರು. ಇದಕ್ಕೆ ರೈಲ್ವೆ ಇಲಾಖೆ ನೀಡಿದ ಉತ್ತರ ಮಾತ್ರ ಎಲ್ಲರಿಗೂ ಶಾಕ್ ಕೊಟ್ಟಿದೆ.
2023ರಲ್ಲಿ ಸುಮಾರು 25 ಸಾವಿರ ರೈಲುಗಳ ಅಪಘಾತ ಸಂಭವಿಸಿದೆ ಎಂದು ಕಾಮ್ರಾ ಹೇಳಿದ್ದರು. ಇದಕ್ಕೆ ಉತ್ತರವಾಗಿ ರೈಲ್ವೆಯ ಫ್ಯಾಕ್ಟ್‌ ಚೆಕ್ ವಿಭಾಗವು ಉತ್ತರಿಸಿ, ನಿಮ್ಮ ಹೇಳಿಕೆ ಸುಳ್ಳು. ಒಟ್ಟು ಸಂಭವಿಸಿದ್ದು 24,678 ಎಂದಿದೆ.

ReadThis – ನವೆಂಬರ್ 23 ರಂದು ಸಂಸದ್ ಖೇಲ್ ಮಹೋತ್ಸವ ಅಂಗವಾಗಿ ಮಂಗಳೂರಿನಲ್ಲಿ ನಮೋ ಚೆಸ್ ಟೂರ್ನಮೆಂಟ್ ಆಯೋಜನೆ

ಇದೇ ವರ್ಷ ಸಂಭವಿಸಿದ ರೈಲುಗಳ ಅಪಘಾತದಲ್ಲಿ 22 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ಕುನಾಲ್ ಹೇಳಿದ್ದಾರೆ. ಆದರೆ ವಾಸ್ತವದಲ್ಲಿ 21,803 ಜನ ಮೃತಪಟ್ಟಿದ್ದಾರೆ ಎಂದು ಫ್ಯಾಕ್ಟ್‌ ಚೆಕ್ ತಂಡ ಹೇಳಿದೆ.
‘ಇದು ಖಂಡಿತವಾಗಿಯೂ ಫ್ಯಾಕ್ಟ್ ಚೆಕ್ ಅಲ್ಲ, ಡಬ್ಬಲ್‌ ಪರಿಶೀಲನೆ’ ಎಂದು ಒಬ್ಬರು ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ. ‘ಏನಿದು ಫ್ಯಾಕ್ಟ್‌ ಚೆಕ್‌, ಅಂದಾಜು ಎಂಬುದು ನಿಮಗೆ ಅರ್ಥವಾಗುತ್ತದೆಯೇ?‘ ಎಂದು ಕೇಳಿದ್ದಾರೆ.
ಲೊಕೊ ಪೈಲೆಟ್‌ಗಳ ಕಾರ್ಯ ಒತ್ತಡ ಹೆಚ್ಚಾಗಿದೆ. ಅವರು ಹಲವು ರಾತ್ರಿಪಾಳಿಯನ್ನು ನಿರ್ವಹಿಸಬೇಕಾಗಿದೆ. ಲೊಕೊ ಪೈಲೆಟ್‌ಗಳಿಗೆ ಕರ್ತವ್ಯ ಮತ್ತು ವಿಶ್ರಾಂತಿ ನೀಡಲು ಇಲಾಖೆ ನಿರ್ದಿಷ್ಟ ಕಾನೂನು ಪಾಲಿಸುತ್ತಿದೆ. ಪ್ರತಿ ವರ್ಷ 400 ಹಳಿ ನಿರ್ವಹಣೆ ಮಾಡುವವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬುದು ಸುಳ್ಳು ಆಪಾದನೆಯಾಗಿದೆ. ಇಂದು ಒಂದು ವರ್ಷದಲ್ಲಿ ಅಲ್ಲ, ಬದಲಿಗೆ ಎರಡು ವರ್ಷದಲ್ಲಿ’ ಎಂದು ಇಲಾಖೆ ಹೇಳಿದೆ.

ReadThis- ದುಬೈ ಏರ್ ಶೋನಲ್ಲಿ ಪತನಗೊಂಡ ಎಚ್​​ಎಎಲ್​ ನಿರ್ಮಿತ ತೇಜಸ್ ಯುದ್ಧ ವಿಮಾನ

ಸಿಗ್ನಲ್‌ ದೋಷದಿಂದಾಗಿ ಹಲವು ಅಪಘಾತಗಳು ಸಂಭವಿಸಿದೆ ಎಂದು ಕುನಾಲ್ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರೈಲ್ವೆ, ‘2004ರಿಂದ 2014ರವರೆಗೆ ಅಂಥ 1,711 ಅಪಘಾತಗಳು ಸಂಭವಿಸಿವೆ. ಕಳೆದ 10 ವರ್ಷಗಳಲ್ಲಿ ಅದು 34ಕ್ಕೆ ಇಳಿದಿದೆ. ಸಿಗ್ನಲ್‌ ದೋಷಗಳ ಕುರಿತ ಮಾಹಿತಿ ಸಾರ್ವಜನಿಕ ವೇದಿಕೆಗಳಲ್ಲಿ ಲಭ್ಯ’ ಎಂದಿದೆ. ಹೊಸ ಹಳಿ ನಿರ್ಮಾಣಕ್ಕೆ ವ್ಯಾಪಕ ಹಣ ಕಡಿತಗೊಳಿಸಲಾಗಿದೆ ಎಂದು ಕುನಾಲ್ ಕಾಮ್ರಾ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಇಲಾಖೆ, ‘ಬಜೆಟ್ ದ್ವಿಗುಣಗೊಳಿಸಲಾಗಿದೆ. 2017–18ರಲ್ಲಿ ₹8,884 ಕೋಟಿ ಇದ್ದ ಅನುದಾನ, 2022ರಲ್ಲಿ ₹16,558 ಕೋಟಿಗೆ ಏರಿಸಲಾಗಿದೆ. 5,950 ಕಿ.ಮೀ.ಯಷ್ಟು ಹೊಸ ಹಳಿಗಳ ಅಳವಡಿಕೆಗೆ 2023–24ರಲ್ಲಿ ಚಾಲನೆ ನೀಡಲಾಗಿದೆ’ ಎಂದು ಹೇಳಿದೆ. ಕುನಾಲ್ ಕಾಮ್ರಾ ತಮ್ಮ ವಿಡಿಯೋದಲ್ಲಿ ಹೇಳಿರುವ ಮಾಹಿತಿಗಳು ಬಹುತೇಕ ಅಂದಾಜು ಆಗಿದ್ದು, ಇದೀಗ ಸ್ವತಃ ರೈಲ್ವೆ ಇಲಾಖೆ ಅವರ ಮಾಹಿತಿಗಳ ಪ್ಯಾಕ್ಟ್ ಚೆಕ್ ಎಂದು ಹೇಳಿ ನಿಜವಾದ ಸಂಖ್ಯೆಗಳನ್ನು ನೀಡಿದೆ.

Share Information