
ಇದಕ್ಕೂ ಮುನ್ನ, Shivalik ಮತ್ತು Nanda Devi ಎಂಬ ಎರಡು LPG ನೌಕೆಗಳು ಯಶಸ್ವಿಯಾಗಿ ಹಾರ್ಮುಜ್ ದಾಟಿ ಭಾರತಕ್ಕೆ ಆಗಮಿಸಿದ್ದವು ಸರ್ಕಾರದ ಮೂಲಗಳ ಪ್ರಕಾರ, ಭಾರತೀಯ ನೌಕೆಗಳ ಸುರಕ್ಷಿತ ಸಂಚಾರಕ್ಕಾಗಿ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ಮುಂದುವರಿದಿವೆ. ಹಾರ್ಮುಜ್ ಜಲಸಂಧಿ ಜಗತ್ತಿನ ಪ್ರಮುಖ ಇಂಧನ ಸಾಗಣೆ ಮಾರ್ಗವಾಗಿದ್ದು, ಇಲ್ಲಿ ಉಂಟಾದ ಅಡಚಣೆಗಳಿಂದ ಭಾರತದಲ್ಲಿ LPG ಸರಬರಾಜಿನ ಮೇಲೆ ಒತ್ತಡ ಹೆಚ್ಚಾಗಿದೆ. ದೇಶವು ತನ್ನ ಅಗತ್ಯಗಳ ಬಹುಪಾಲು ಗಲ್ಫ್ ಪ್ರದೇಶದಿಂದಲೇ ಆಮದು ಮಾಡಿಕೊಳ್ಳುವುದರಿಂದ, ಈ ಮಾರ್ಗದ ವ್ಯತ್ಯಯ ಗೃಹ ಬಳಕೆಯ ಗ್ಯಾಸ್ ವಿತರಣೆಯ ಮೇಲೂ ಪರಿಣಾಮ ಬೀರಿದೆ. ಕೆಲವೆಡೆ ಗ್ಯಾಸ್ ವಿತರಣೆಯಲ್ಲಿ ವಿಳಂಬ ಕಂಡುಬಂದಿದ್ದು, ಕೈಗಾರಿಕಾ ಬಳಕೆಯಲ್ಲಿಯೂ ಕಡಿತ ಕ್ರಮ ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ, ಭಾರತ ಪರ್ಯಾಯವಾಗಿ ಅಮೆರಿಕ ಸೇರಿದಂತೆ ಇತರ ದೇಶಗಳಿಂದ LPG ಆಮದು ಹೆಚ್ಚಿಸಲು ಕ್ರಮ ಕೈಗೊಂಡಿದ್ದು, ಇಂಧನ ಭದ್ರತೆ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ತಜ್ಞರ ಪ್ರಕಾರ, ಹಾರ್ಮುಜ್ ಮಾರ್ಗದಲ್ಲಿ ಸಾಗಣೆ ಸಂಪೂರ್ಣವಾಗಿ ಸಾಮಾನ್ಯ ಸ್ಥಿತಿಗೆ ಮರಳಲು ಇನ್ನೂ ಸಮಯ ಬೇಕಾಗಬಹುದು.