ನವದೆಹಲಿ ಎಪ್ರಿಲ್ 08: : ಇರಾನ್ ಮತ್ತು ಅಮೇರಿಕಾದ ನಡುವೆ ಕದನ ವಿರಾಮ ಘೋಷಣೆ ಆಗಿದ್ದರೂ ಕೂ಼ ಇದೀಗ ಭಾರತೀಯ ರಾಯಭಾರಿ ಕಚೇರಿ ಇರಾನ್ ನಲ್ಲಿರುವ ಭಾರತೀಯರಲಿಗೆ ತಕ್ಷಣ ಇರಾನ್ ತೊರೆಯುವಂತೆ ಸೂಚನೆ ನೀಡಿದ್ದಾರೆ.

ಈ ಮೊದಲು ಇರಾನ್ ನಲ್ಲಿ ‘ಎಲ್ಲಿದ್ದೀರೋ ಅಲ್ಲೇ ಇರಿ’ ಎಂದು ಸೂಚಿಸಿದ್ದ ಭಾರತೀಯ ರಾಯಭಾರ ಕಚೇರಿಯು, ಈಗ ಪರಿಸ್ಥಿತಿಯ ಗಂಭೀರತೆಯನ್ನು ಅರಿತು “ತ್ವರಿತವಾಗಿ ಇರಾನ್ ದೇಶದಿಂದ ಹೊರಹೋಗಿ” ಎಂದು ಸೂಚನೆ ನೀಡಿದೆ. ಅಲ್ಲದೆ ರಾಯಭಾರ ಕಚೇರಿಯ ಅನುಮತಿಯಿಲ್ಲದೆ ಯಾವುದೇ ಅಂತರರಾಷ್ಟ್ರೀಯ ಭೂ ಗಡಿಗಳನ್ನು ದಾಟಲು ಪ್ರಯತ್ನಿಸಬಾರದು ಎಂದು ಎಚ್ಚರಿಸಲಾಗಿದೆ.
ರಾಯಭಾರ ಕಚೇರಿಯು ತನ್ನ ತುರ್ತು ಸಂಪರ್ಕ ಸಂಖ್ಯೆಗಳನ್ನು – +989128109115; +989128109109; +989128109102; +989932179359 ಮತ್ತು ಮೇಲ್ ಐಡಿ – cons.tehran@mea.gov.in ಅನ್ನು ಸಹ ನೀಡಿದೆ.
ಈಗಾಗಲೇ ಅಮೇರಿಕಾ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಎರ್ಪಟ್ಟಿದೆ. ಆದರೂ ಏಕಾಏಕಿ ಭಾರತೀಯ ರಾಯಭಾರಿ ಕಚೇರಿಯಿಂದ ಈ ವಾರ್ನಿಂಗ್ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.