DAKSHINA KANNADA
ಮಂಗಳೂರು: ಅಪಾಯಕ್ಕೆ ಸಿಲುಕಿದ ಮೀನುಗಾರರನ್ನು ದೋಣಿ ಸಮೇತ ರಕ್ಷಿಸಿದ ಕೋಸ್ಟ್ ಗಾರ್ಡ್..!!
ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಎಂಜಿನ್ ವೈಫಲ್ಯಕ್ಕೀಡಾಗಿ ಅಪಾಯಕ್ಕೆ ಸಿಲುಕಿದ್ದ ಕಾರವಾರ ಮೂಲದ ವ್ಯಕ್ತಿಗೆ ಸೇರಿದ್ದ ಮೀನುಗಾರಿಕೆ ದೋಣಿಯನ್ನು ಮಂಗಳೂರು ಕೋಸ್ಟ್ ಗಾರ್ಡ್ ಕಣ್ಗಾವಲಿನಲ್ಲಿರುವ ಸಾವಿತ್ರಿಬಾಯಿ ಪುಲೆ ನೌಕೆ ಪತ್ತೆ ಹಚ್ಚಿ ಮೀನುಗಾರರ ಸಹಿತ ದೋಣಿಯನ್ನು ರಕ್ಷಿಸಿದೆ .
ಎಪ್ರಿಲ್ 13 ರಂದು ಕಾರವಾರದಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ‘ರೋಸರಿ’ ಹೆಸರಿನ ದೋಣಿ ಎಂಜಿನ್ ವೈಫಲ್ಯದಿಂದ ಸಮುದ್ರದಲ್ಲಿ ಸಿಲುಕಿಕೊಂಡಿತ್ತು ಎನ್ನಲಾಗಿದೆ. ದೋಣಿಯ ಸಿಬ್ಬಂದಿ ಕರೆ ಮಾಡಿ ನೆರವನ್ನು ಕೋರಿದ ಹಿನ್ನೆಲೆಯಲ್ಲಿ ಕಾರವಾರ ಜಿಲ್ಲಾ ಮೀನುಗಾರಿಕೆ ಇಲಾಖೆಯು ನೆರವಿಗೆ ಧಾವಿಸುವಂತೆ ಕೋಸ್ಟ್ ಗಾರ್ಡ್ ಗೆ ಮನವಿ ಮಾಡಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ದೋಣಿಗೆ ತಾಂತ್ರಿಕ ಸಹಾಯವನ್ನು ಒದಗಿಸಿ ದೋಣಿಯನ್ನು ಸುರಕ್ಷಿತವಾಗಿ ಕಾರವಾರ ಬಂದರಿಗೆ ಎಳೆದು ತಂದು ಮಾಲಕರಿಗೆ ಹಸ್ತಾಂತರಿಸಿದ್ದಾರೆ. ಕಾರವಾರ ತೀರದಿಂದ ಸುಮಾರು 215 ನಾಟಿಕಲ್ ಮೈಲ್ ದೂರಲ್ಲಿ ಕರಾವಳಿ ತಟ ರಕ್ಷಣಾ ಪಡೆ ಈ ಕಾರ್ಯಾಚರಣೆ ನಡೆಸಿ ಎಲ್ಲಾ ಮೀನುಗಾರರನ್ನು ರಕ್ಷಣೆ ಮಾಡಿದೆ.