Connect with us

    LATEST NEWS

    ನಗರಕ್ಕೆ ಬಂದ ಕಾಡುಕೋಣಗಳನ್ನು ಸೆರೆಹಿಡಿದ ಅರಣ್ಯ ಇಲಾಖೆ

    ನಗರಕ್ಕೆ ಬಂದ ಕಾಡುಕೋಣಗಳನ್ನು ಸೆರೆಹಿಡಿದ ಅರಣ್ಯ ಇಲಾಖೆ

    ಮಂಗಳೂರು ಮೇ.5 : ಮಂಗಳೂರಿನ ನಗರದಲ್ಲಿ ಕಾಣಿಸಿಕೊಂಡ ಎರಡು ಕಾಡುಕೋಣಗಳನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.  ಮಂಗಳೂರಿನ ನಗರದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಎರಡು ಕಾಡುಕೋಣಗಳು ಪ್ರತ್ಯಕ್ಷವಾಗಿದ್ದು, ನಗರದಲ್ಲಿ ರಾಜರೋಷವಾಗಿ ಸುತ್ತಾಡುತ್ತಿದ್ದವು, ಜನರು ಗಾಬರಿಗೊಂಡಿದ್ದರು. ಒಂದು ಕಾಡು ಕೋಣ ಬಿಜೈ ಕಾಪಿಕಾಡ್‌ನ ಹ್ಯಾಟ್ ಹಿಲ್ ಬಳಿ ಹಾಗೂ ಇನ್ನೊಂದು ಮಣ್ಣಗುಡ್ಡೆಯ ವೇರ್ ಹೌಸ್ ಬಳಿ ಪ್ರತ್ಯಕ್ಷವಾಗಿತ್ತು.

    ಇನ್ನು ಜನನಿಬಿಡ ಪ್ರದೇಶದಲ್ಲಿ ಹೀಗೆ ಒಂಟಿ ಕಾಡುಕೋಣಗಳು ಪ್ರತ್ಯಕ್ಷವಾದ ಪರಿಣಾಮ ಸ್ಥಳೀಯರು ಭಯಭೀತರಾಗಿದ್ದರು. ಈ ಬಗ್ಗೆ ಪೊಲೀಸರಿಗೆ ಸುದ್ದಿ ಸಿಗುತ್ತಿದ್ದಂತೆ ಅರಣ್ಯ ಇಲಾಖೆಗೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ತಂಡ ಕಾಡುಕೋಣ ಹಿಡಿಯುವ ಕಾರ್ಯಾಚಣೆ ನಡೆಸಿತು.ಮಧ್ಯಾಹ್ನದವರೆಗೆ ಕಾಡುಕೋಣಗಳನ್ನು ಸೆರೆ ಹಿಡಿಯುವುದು ಸಾಧ್ಯವಾಗಿರಲಿಲ್ಲ. ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಜನರ ಓಡಾಟವೂ ಇದ್ದು, ಕಾರ್ಯಾಚರಣೆ ನಡೆಸಲು ಸ್ವಲ್ಪ ತೊಂದರೆ ಆಗಿತ್ತು. ಇದೀಗ ಕಾಡುಕೋಣಗಳನ್ನು ಸೆರೆ ಹಿಡಿಯಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಬಜ್ಪೆ, ಅದ್ಯಪಾಡಿ ಅರಣ್ಯ ಪ್ರದೇಶದ ಸುತ್ತಮುತ್ತ ಕಾಡುಕೋಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಅಲ್ಲಿಂದ ಬಂದಿರುವ ಸಾಧ್ಯತೆ ಇರಬಹುದೆಂದು ಅರಣ್ಯ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದು, ಲಾಕ್‌ಡೌನ್‌ನಿಂದ ಜನ ಸಂಚಾರವಿಲ್ಲದ ಕಾರಣ ಕಾಡುಕೋಣಗಳು ತಪ್ಪಿ ನಗರ ಪ್ರವೇಶಿಸಿರಬಹುದು ಎಂದು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply