Connect with us

ಫ್ರಟರ್ನಿಟಿಫೆಸ್ಟ್ ಅಂಗವಾಗಿ ಇಂಡಿಯಾ ಫ್ರಟರ್ನಿಟಿ ಫೋರಮ್ ವತಿಯಿಂದ “ಸ್ನೇಹಕೂಟ-19”

ಫ್ರಟರ್ನಿಟಿಫೆಸ್ಟ್ ಅಂಗವಾಗಿ ಇಂಡಿಯಾ ಫ್ರಟರ್ನಿಟಿ ಫೋರಮ್ ವತಿಯಿಂದ “ಸ್ನೇಹಕೂಟ-19”

ರಿಯಾದ್ ಜನವರಿ 31: ಅನಿವಾಸಿ ಭಾರತೀಯರನ್ನು ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಒಂದು ಗೂಡಿಸುವ ನಿಟ್ಟಿನಲ್ಲಿ ಇಂಡಿಯಾ ಫ್ರಟರ್ನಿಟಿ ಫೋರಮ್ ರಿಯಾದ್ ವತಿಯಿಂದ ಮಾರ್ಚ್ 21 ರಂದು ನಡೆಯುವ “ಸ್ನೇಹಕೂಟ-19” ಇದರ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮ ಜನವರಿ 29ರಂದು ರಿಯಾದ್ ನ ಫ್ರಟರ್ನಿಟಿ ಹೌಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಫ್ರಟರ್ನಿಟಿ ಫೆಸ್ಟ್ ಹೆಸರಿನಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಸೌದಿ ಅರೇಬಿಯಾದ್ಯಂತ ನಡೆಸಲಾಗುತ್ತಿದೆ.

ಕಾರ್ಯಕ್ರಮದ ಭಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಇಂಡಿಯಾ ಫ್ರಟರ್ನಿಟಿ ಫೋರಮ್, ರಿಯಾದ್ ನ ಕರ್ನಾಟಕ ಚಾಪ್ಟರ್ ಅಧ್ಯಕ್ಷರಾದ ಇಸ್ಮಾಯಿಲ್ ಯಸೂಫ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲಾ ಅನಿವಾಸಿ ಭಾರತೀಯರಿಗೆ ಆಹ್ವಾನ ನೀಡಿದರು.

ರಿಯಾದ್ ಎಕ್ಸಿಟ್ -16 ಸುಲಯ್ ನ ತಾಕತ್ ವ್ಯು ಇಸ್ತಿರಾಹ್ ದಲ್ಲಿ ಮಾರ್ಚ್ 21 ರಂದು ನಡೆಯಲಿರುವ ಕುಟುಂಬ ಸಮ್ಮಿಳನದಲ್ಲಿ ವಿವಿಧ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳು ಸಾರ್ವಜನಿಕ ಭಾಷಣ, ಕ್ರೀಡೆ, ರಸಪ್ರಶ್ನೆ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯಲಿರುವುದು.

ಪತ್ರಿಕಾಗೋಷ್ಠಿಯಲ್ಲಿ ಇಂಡಿಯಾ ಫ್ರಟರ್ನಿಟಿ ಫೋರಮ್, ರಿಯಾದ್ ನ ಕರ್ನಾಟಕ ಚಾಪ್ಟರ್ ಪ್ರಧಾನ ಕಾರ್ಯದರ್ಶಿಯಾದ ತಾಜುದ್ದೀನ್ ಸಾಲ್ಮರ, ಕರ್ನಾಟಕ ಚಾಪ್ಟರ್ ಸದಸ್ಯರಾದ ಅಬ್ದುಲ್ ರೌಫ್, ಉಸ್ಮಾನ್, ಅಬ್ದುಲ್ ರಝಾಕ್ ಮತ್ತು ಸ್ನೇಹಕೂಟ ಕಾರ್ಯಕ್ರಮ ಸಂಯೋಜಕರಾದ ಅಬೂಬಕರ್ ಸಿದ್ದಿಕ್ ಉಪಸ್ಥಿತರಿದ್ದರು.

Facebook Comments

comments