ಬೆಂಗಳೂರು ನವೆಂಬರ್ 23: ದಕ್ಷಿಣ ಆಫ್ರಿಕಾ ವಿರುದ್ದ ಏಕದಿನ ಸರಣಿಗೆ ಭಾರತ ತಂಡದ ಕ್ಯಾಪ್ಟನ್ ಆಗಿ ಕನ್ನಡಿಗ ಕೆಎಲ್ ರಾಹುಲ್ ಆಯ್ಕೆಯಾಗಿದ್ದಾರೆ.


ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನ ಬ್ಯಾಟಿಂಗ್ ವೇಳೆ ಶುಭ್​​ಮನ್ ಗಿಲ್ ಅವರು ಕುತ್ತಿಗೆ ನೋವಿನ ಸಮಸ್ಯೆಗೀಡಾಗಿದ್ದರು. ಹೀಗಾಗಿ ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಮೈದಾನ ತೊರೆದಿದ್ದರು. ಈ ಹಿನ್ನೆಲೆಯಲ್ಲಿ ಗಿಲ್‌ ಮತ್ತು ಅಯ್ಯರ್‌ ಅನುಪಸ್ಥಿತಿಯ ಕಾರಣದಿಂದ ಯಶಸ್ವಿ ಜೈಸ್ವಾಲ್‌ ಮತ್ತು ತಿಲಕ್‌ ವರ್ಮಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕಪ್ತಾನನಾಗಿ ಕೆ ಎಲ್ ರಾಹುಲ್ ಆಯ್ಕೆಯಾಗಿದ್ದಾರೆ.

Read This – ಮಂಗಳೂರಿನಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆ

ವೇಗಿಗಳ ಕೋಟಾದಲ್ಲಿ ಹರ್ಷಿತ್‌ ರಾಣಾ, ಪ್ರಸಿಧ್‌ ಕೃಷ್ಣ, ಅರ್ಶ್‌ದೀಪ್ ಸಿಂಗ್‌ ರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ಅಲ್‌ ರೌಂಡರ್‌ ನಿತೀಶ್ ಕುಮಾರ್ ರೆಡ್ಡಿ ತಂಡದಲ್ಲಿದ್ದಾರೆ. ಆದರೆ ಈಗ ಚೇತರಿಸಿಕೊಂಡಿರುವ ಆಲ್‌ ರೌಂಡರ್ ಹಾರ್ದಿಕ್‌ ಪಾಂಡ್ಯ ತಂಡಕ್ಕೆ ವಾಪಸ್ ಆಗಿಲ್ಲ.‌

Share Information