ತಿರುವನಂತಪುರ ನವೆಂಬರ್ 16: ಶಬರಿಮಲೆ ವಾರ್ಷಿಕ ಋತು ಪ್ರಾರಂಭವಾಗಿದೆ. ಈ ನಡುವೆ ಕೇರಳದಲ್ಲಿ ಮಿದುಳು ತಿನ್ನುವ ಅಮೀಬಾ ಬ್ಯಾಕ್ಟೀರಿಯಾದ ಹರಡುವಿಕೆ ಹೆಚ್ಚುತ್ತಿದ್ದು, ಅಯ್ಯಪ್ಪ ಭಕ್ತರಿಗೆ ಕೇರಳ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆಯನ್ನು ನೀಡಿ ಮಾರ್ಗಸೂಚಿಯನ್ನು ನೀಡಿದೆ.

ನವೆಂಬರ್ 17 ರಂದು ಶಬರಿಮಲೆಯ ವಾರ್ಷಿಕ ತೀರ್ಥಯಾತ್ರೆ ಆರಂಭವಾಗಲಿದ್ದು, ಕೇರಳ ಆರೋಗ್ಯ ಇಲಾಖೆ ಶನಿವಾರ ಶಬರಿಮಲೆ ಯಾತ್ರಾರ್ಥಿಗಳಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಭಕ್ತರು ಈ ಸೋಂಕು ಹರಡದಂತೆ ತಮ್ಮ ಮೂಗಿಗೆ ಮುಸುಕು ಅಥವಾ ಸುರಕ್ಷೆ ಧರಿಸುವಂತೆ ಸೂಚಿಸಲಾಗಿದೆ. ಜತೆಗೆ ಇನ್ನಿತರೆ ಯಾವುದೇ ಆರೋಗ್ಯ ಸಮಸ್ಯೆ ಹೊಂದಿರು ವವರು ತಮ್ಮ ಆರೋಗ್ಯದ ದಾಖಲೆಗಳು, ಜೌಷಧ ಗಳನ್ನು ತಮ್ಮ ಬಳಿ ಇರಿಸಿಕೊಳ್ಳುವಂತೆಯೂ ಹಾಗೂ ನಿತ್ಯದ ಔಷಧವನ್ನು ವ್ರತದ ಕಾರಣಕ್ಕೆ ನಿಲ್ಲಿಸದಂ ತೆಯೂ ಕೋರಿಕೊಂಡಿದೆ. ಅಲ್ಲದೇ ಪಂಪಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವಾಗ ಮೂಗಿನೊಳಗೆ ನೀರು ಹೋಗ ದಂತೆ ಎಚ್ಚರ ವಹಿಸುವಂತೆಯೂ ಕೇಳಿಕೊಂಡಿದೆ.
Read This – ವಿಚಾರಣೆ ವೇಳೆ ಹಲ್ಲೆ – ಧರ್ಮಸ್ಥಳ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳ ವಿರುದ್ದ ದೂರು ದಾಖಲಿಸಿದ ಜಯಂತ್ ಟಿ
ಶಬರಿಮಲೆ ಅಯ್ಯಪ್ಪ ಭಕ್ತರು ಬೆಟ್ಟವನ್ನುನ ನಿಧಾನವಾಗಿ ಹತ್ತಬೇಕು., ಆಯಾಸ, ಎದೆ ನೋವು, ಉಸಿರಾಟದ ತೊಂದರೆ ಅಥವಾ ದೌರ್ಬಲ್ಯವನ್ನು ಅನುಭವಿಸಿದರೆ ವೈದ್ಯಕೀಯ ಸಹಾಯವನ್ನು ಪಡೆಯಲು ಸೂಚಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ, ಅವರು 04735 203232 ಅನ್ನು ಸಂಪರ್ಕಿಸಬಹುದು. ಭಕ್ತರು ಬೀಸಿ ನೀರನ್ನು ಮಾತ್ರ ಕುಡಿಯಲು ಸೂಚನೆ ನೀಡಿದೆ.



