Connect with us

LATEST NEWS

ರಾಜಕರಣದಲ್ಲಿ ಮಿಥುನ್ ರೈ ಒಬ್ಬ ಬಚ್ಚಾ : ಶಾಸಕ ಸುನಿಲ್ ಕುಮಾರ್

ರಾಜಕರಣದಲ್ಲಿ ಮಿಥುನ್ ರೈ ಒಬ್ಬ ಬಚ್ಚಾ : ಶಾಸಕ ಸುನಿಲ್ ಕುಮಾರ್

ಮಂಗಳೂರು, ಮಾರ್ಚ್ 25 : ಕಾಂಗ್ರೆಸ್ ಆಭ್ಯರ್ಥಿ ಮಿಥುನ್ ರೈ ವಿರುದ್ಧ ಬಿಜೆಪಿ ಶಾಸಕ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಬಜರಂಗದಳ ನಿಷೇಧ ಮಾಡ್ತೀವಿ ಅಂತಾ ಹೇಳಿದ್ದಾರೆ.

ಎಂತೆಂತಾ ಕಾಂಗ್ರೆಸ್ ನಾಯಕರು ಬಂದು ಹೋದರೂ ನಿಷೇಧ ಮಾಡಲು ಸಾಧ್ಯವಾಗಿಲ್ಲ. ಇನ್ನು ಈ ಬಚ್ಚಾ ರಾಜಕಾರಣಿ ಯಿಂದ ಆಗುತ್ತಾ? ಎಂದು ಮಿಥುನ್ ರೈ ವಿರುದ್ದ ಹರಿಹಾಯ್ದಿದ್ದಾರೆ. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡುವ ಪೂರ್ವಭಾವಿಯಾಗಿ ಮಂಗಳೂರಿನ ಬಂಟ್ಸ್ ಹಾಸ್ಟೆಲಿನ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಒಬ್ಬ ಬಚ್ಚಾ. ಇವರು ಭಜರಂಗದಳವನ್ನು ನಿಷೇಧ ಮಾಡ್ತಾನಂತೆ. ಎಂತೆಂತಾ ಕಾಂಗ್ರೆಸ್ ನಾಯಕರು ಬಂದು ಹೋದರೂ ನಿಷೇಧ ಮಾಡಲು ಸಾಧ್ಯವಾಗಿಲ್ಲ. ಇನ್ನು ಈ ಬಚ್ಚಾ ರಾಜಕಾರಣಿ ಯಿಂದ ಆಗುತ್ತಾ ಎಂದು ಲೇವಾಡಿ ಮಾಡಿದರು. ಚುನಾವಣೆಯಲ್ಲಿ ಬಿಜೆಪಿ ವಿಜಯದ ಬಳಿಕ ಗ್ರಾಮ ಗ್ರಾಮದಲ್ಲಿ ಬಜರಂಗದಳ ಶಾಖೆಗಳನ್ನು ತೆರೆದು ಸಂಘಟನೆಯನ್ನು ಇನ್ನೂ ಬಲಿಷ್ಠ ಮಾಡಲಾಗುವುದು ಎಂದು ಹೇಳಿದರು. ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ಉಮನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ, ಹರೀಶ್ ಪೂಂಜಾ, ಸಹಿತ ವಿವಿಧ ನಾಯಕರುಗಳು ಸಮಾವೇಶದಲ್ಲಿ ಉಪಸ್ಥಿತರಿದ್ದರು.

Facebook Comments

comments