LATEST NEWS
ಇನ್ನು ಮುಂದೆ ಅರ್ಜಿ ಸಲ್ಲಿಸಿದ ತಕ್ಷಣವೇ ಜಾತಿ/ಆದಾಯ ಪ್ರಮಾಣ ಪತ್ರ
ಇನ್ನು ಮುಂದೆ ಅರ್ಜಿ ಸಲ್ಲಿಸಿದ ತಕ್ಷಣವೇ ಜಾತಿ/ಆದಾಯ ಪ್ರಮಾಣ ಪತ್ರ
ಮಂಗಳೂರು ಮಾರ್ಚ್ 13 :-ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಪ್ರತಿ ವರ್ಷ ಅಂದಾಜು ಒಂದು ಕೋಟಿಯಷ್ಟು ಜಾತಿ ಪ್ರಮಾಣ ಪತ್ರ,
ಆದಾಯ ಪ್ರಮಾಣ ಪತ್ರ, ಹಾಗೂ ವಾಸ ಸ್ಥಳ ಪ್ರಮಾಣ ಪತ್ರಗಳನ್ನು 800 ಗ್ರಾಮೀಣ ನಾಡಕಛೇರಿಗಳಿಂದ ನಾಗರೀಕರಿಗೆ ವಿತರಿಸುತ್ತಿದೆ.
ನಾಗರಿಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವ ಉದ್ದೇಶದಿಂದ ಪಡಿತರ ಚೀಟಿಯನ್ನು ಹೊಂದಿರುವ ಗ್ರಾಮೀಣ ಪ್ರದೇಶದ ನಾಗರೀಕರ ಜಾತಿ,
ಆದಾಯ ಮತ್ತು ವಾಸಸ್ಥಳದ ಬಗ್ಗೆ ಕಂದಾಯ ಇಲಾಖೆಯು ತನ್ನ ಗ್ರಾಮಲೆಕ್ಕಿಗರನ್ನು ಮನೆ-ಮನೆಗೆ ನಿಯೋಜಿಸಿ, ಮಾಹಿತಿಗಳನ್ನು ಸಂಗ್ರಹಿಸಿ, ತಹಶೀಲ್ದಾರರು ಹಾಗೂ ಉಪತಹಶಿಲ್ದಾರರಿಂದ ವಿದ್ಯುನ್ಮಾನವಾಗಿ ಸಹಿ ಮಾಡಿದ ಅಂದಾಜು 80 ಲಕ್ಷ ಕುಟುಂಬಗಳ ಸುಮಾರು 4 ಕೋಟಿ ನಾಗರಿಕರ ಜಾತಿ ಪ್ರಮಾಣ ಪತ್ರ ,
ಆದಾಯ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ವಾಸಸ್ಥಳ ಪ್ರಮಾಣ ಪತ್ರಗಳನ್ನು ದತ್ತಾಂಶದಲ್ಲಿ ಸಿಧ್ಧಪಡಿಸಿಟ್ಟುಕೊಳ್ಳಲಾಗಿದೆ.
ರಾಜ್ಯದ ನಾಗರೀಕರು ಜಾತಿ, ಆದಾಯ, ಜಾತಿ ಮತ್ತು ಆದಾಯ ಹಾಗೂ ವಾಸಸ್ಥಳ ದೃಢೀಕರಣ ಪತ್ರಗಳಿಗಾಗಿ ಅರ್ಜಿಯನ್ನು ಸಲ್ಲಿಸಿದ ಕೂಡಲೇ, ಇ-ಕ್ಷಣ ಕಾರ್ಯಕ್ರಮದಡಿ ಅರ್ಜಿದಾರರು ಹೊಂದಿರುವ ಪಡಿತರ ಚೀಟಿಯ ಸಂಖ್ಯೆಯ ಆಧಾರದ ವೇಳೆ ಅಥವಾ ಅವರ ಹೆಸರನ್ನು ದತ್ತಾಂಶದಲ್ಲಿ ಶೋಧಿಸಿ, ನಿಗದಿತ ಅರ್ಜಿ ಶುಲ್ಕವನ್ನು ಪಡೆದುಕೊಂಡು, ಅವರ ಕೋರಿಕೆಯ ಪ್ರಮಾಣ ಪತ್ರವನ್ನು ತಕ್ಷಣವೇ ವಿತರಿಸುವ ವ್ಯವಸ್ಥೆಯನ್ನು ಕಂದಾಯ ಇಲಾಖೆಯು ಅನುಷ್ಟಾನಗೊಳಿಸಿದೆ.
ತಕ್ಷಣವೇ ಪ್ರಮಾಣ ಪತ್ರವನ್ನು ಪಡೆಯುವ ಇ-ಕ್ಷಣ ವ್ಯವಸ್ಥೆಯಡಿ ಇದುವರೆಗೆ 419414 ಪ್ರಮಾಣ ಪತ್ರಗಳನ್ನು ರಾಜ್ಯದ ನಾಗರೀಕರು ಪಡೆದಿರುತ್ತಾರೆ.
You must be logged in to post a comment Login