Connect with us

LATEST NEWS

ಮಂಜಲ್ಪಾದೆ ; ಅಕ್ರಮ ಮರಳುಗಾರಿಕೆಗೆ ಅಧಿಕಾರಿಗಳ ದಾಳಿ, 30 ಲೋಡ್ ಮರಳು ವಶಕ್ಕೆ

ಮಂಗಳೂರು, ‌ಜೂನ್ 17:  ಕಾವೂರಿನ ಮಂಜಲ್ಪಾದೆ ಎಂಬಲ್ಲಿ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳೆತ್ತುತ್ತಿದ್ದ ವೇಳೆ ಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು 30 ಲೋಡ್ ನಷ್ಟು ಮರಳನ್ನು ಸೀಝ್ ಮಾಡಿದ್ದಾರೆ.

ಮಂಜಲ್ಪಾದೆ, ಮರವೂರು ಭಾಗದಲ್ಲಿ ಹಲವು ದಿನಗಳಿಂದ ಅಕ್ರಮವಾಗಿ ಮರಳುಗಾರಿಕೆ ನಡೀತಿದ್ದ ಬಗ್ಗೆ ಸಾರ್ವಜನಿಕರು ದೂರುತ್ತಿದ್ದರು. ಬಿಜೆಪಿ ಶಾಸಕರ ಕೃಪೆಯಿಂದಲೇ ಅಕ್ರಮ ಮರಳು ದಂಧೆ ನಡೀತಿರುವ ಬಗ್ಗೆ ಆರೋಪ ವ್ಯಕ್ತವಾಗಿತ್ತು. ಹಗಲು ಹೊತ್ತಿನಲ್ಲಿ ಮರಳು ಎತ್ತಿ ರಾತ್ರಿ ವೇಳೆ ಲಾರಿಗಳಲ್ಲಿ ನೂರಾರು ಲೋಡ್ ಮರಳು ಹೊರಭಾಗಕ್ಕೆ ಸಾಗಿಸಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದರು. ಇದೀಗ ಮಂಗಳೂರಿನ ಮೈನ್ಸ್ ಅಧಿಕಾರಿಗಳು ದಾಳಿ ನಡೆಸಿ, ಮರಳು ರಾಶಿ ಹಾಕಿದ್ದ ದಿಬ್ಬವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಮರಳು ಸಂಗ್ರಹಕ್ಕೆ ಬಳಸಿದ್ದ ಜೆಸಿಬಿ, ಟಿಪ್ಪರ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಹಿಂದೆ ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಸಾರ್ವಜನಿಕರಿಗೆ ಮರಳು ಲಭ್ಯವಾಗ್ತಿತ್ತು. ಈಗ ಸ್ಯಾಂಡ್ ಬಝಾರ್ ಆ್ಯಪ್ ಬಳಕೆಯಲ್ಲಿಲ್ಲ. ಇದರಿಂದಾಗಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೀತಿದೆ ಎನ್ನಲಾಗುತ್ತಿದೆ. ನದಿಯಿಂದ ಮಾವನ ಶ್ರಮದಿಂದ ಮಾತ್ರ ಮರಳು ತೆಗೆಯಬೇಕೆಂಬ ನಿಯಮ ಇದ್ದರೂ, ಅಡ್ಯಾರ್, ಮಂಜಲ್ಪಾದೆ ಸೇರಿದಂತೆ ಹಲವು ಕಡೆ ಜೆಸಿಬಿಯಿಂದಲೇ ಮರಳನ್ನು ಎತ್ತಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Facebook Comments

comments