ಕಂಟೈನರ್ ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ 7 ಮಂದಿ ಅರೆಸ್ಟ್

ಬೆಳ್ತಂಗಡಿ ಜುಲೈ 13 : ಮತ್ತೊಂದು ಐಷಾರಾಮಿ ಅಕ್ರಮ ಜಾನುವಾರು ಸಾಗಾಟ ಪ್ರಕರಣವನ್ನು ಬೆಳ್ತಂಗಡಿ ಪೋಲೀಸರು ಪತ್ತೆಹಚ್ಚಿದ್ದಾರೆ. ಈ ಬಾರಿ ಗೋ ಸಾಗಾಟಗಾರರು ಕಂಟೈನರ್ ಲಾರಿಯಲ್ಲಿ ಜಾನುವಾರುಗಳನ್ನು ತುಂಬಿಸಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಬೆಳ್ತಂಗಡಿ ಸಮೀಪದ ಪಣಕಜೆ ಎಂಬಲ್ಲಿ ನಿಖರ ಮಾಹಿತಿಯ ಆಧಾರದಲ್ಲಿ ಕಂಟೈನರ್ ಲಾರಿಯನ್ನು ತಡೆಹಿಡಿದ ಬಂಟ್ವಾಳ ಎಎಸ್ಪಿ ನೇತೃತ್ವದ ಪೋಲೀಸ್ ತಂಡ ಲಾರಿಯಿಂದ 15 ಕೋಣ ಹಾಗೂ 2 ಎಮ್ಮೆ ಗಳನ್ನು ರಕ್ಷಿಸಿದ್ದಾರೆ. ಈ ಸಂಬಂಧ 7 ಆರೋಪಿಗಳನ್ನೂ ಪೋಲೀಸರು ಬಂಧಿಸಿದ್ದಾರೆ. ಲಾರಿಗೆ ಬೆಂಗಾವಲಾಗಿ ಸಾಗುತ್ತಿದ್ದ ಆಲ್ಟೋ ಕಾರನ್ನೂ ಪೋಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ದಕ್ಷಿಣಕನ್ನಡ ಹಾಗೂ ಕಾಸರಗೋಡು ಪರಿಸರದವರಾಗಿದ್ದು, ಹೈದರ್ ವೇಣೂರು, ಮಂಜು ಹಾಸನ ಹಾಗೂ ಕಾಸರಗೋಡು ನಿವಾಸಿಗಳಾದ ಅಬ್ದುಲ್ ರಹಮಾನ್, ಮುಸ್ತಾಕ್, ಅಕ್ಬರ್,ಮಹಮ್ಮದ್,ಬಾಬು ಎಂದು ಗುರುತಿಸಲಾಗಿದೆ.

ಜಾನುವಾರುಗಳನ್ನು ಕಾಸರಗೋಡಿನ ಕಸಾಯಿಖಾನೆಗೆ ಸಾಗಿಸುತ್ತಿದ್ದರೆನ್ನಲಾಗಿದ್ದು, ಇದೀಗ ಎಲ್ಲಾ ಜಾನುವಾರುಗಳನ್ನು ಅರಸೀಕೆರೆ ಗೋಶಾಲೆಗೆ ಸೇರಿಸಲಾಗಿದೆ. ಈ ಹಿಂದೆ ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ಗೋವುಗಳ ಸಾಗಾಟ ಮಾಡಿದ ಪ್ರಕರಣವೂ ಬೆಳಕಿಗೆ ಬಂದಿತ್ತು.

VIDEO

33 Shares

Facebook Comments

comments