Connect with us

LATEST NEWS

ಅಕ್ರಮ ಗೋಸಾಗಾಟ ತಡೆಗಟ್ಟಲು ಪೊಲೀಸ್ ಇಲಾಖೆಗೆ ಶಾಸಕ ವೇದವ್ಯಾಸ್ ಕಾಮತ್ ಸೂಚನೆ

ಮಂಗಳೂರು ಅಕ್ಟೋಬರ್ 7: ಮಂಗಳೂರು ನಗರ ದಕ್ಷಿಣ ಸೇರಿದಂತೆ ಜಿಲ್ಲೆಯಾದ್ಯಂತ ಸಕ್ರಿಯವಾಗಿರುವ ಅಕ್ರಮ ಗೋಸಾಗಾಟವನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಶಾಸಕ ವೇದವ್ಯಾಸ್ ಕಾಮತ್ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋ ಸಾಗಾಟದಿಂದ ಅಶಾಂತಿ ಸೃಷ್ಟಿಯಾಗುತ್ತಿದೆ. ಗೋವಿಗೆ ಹಿಂದೂ ಧರ್ಮದಲ್ಲಿ ಅತ್ಯಂತ ಶ್ರದ್ಧೆ ಹಾಗೂ ನಮ್ಮ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುವ ಅನೇಕ ಕುಟುಂಬಗಳಿವೆ. ಕುಟುಂಬಕ್ಕೆ ಆಧಾರ ಸ್ತಂಬವಾಗಿರುವ ಗೋವುಗಳ ಕಳ್ಳತನದಿಂದ ಇಡೀ ಕುಟುಂಬವೇ ಬೀದಿ ಪಾಲಾಗುವುದನ್ನು ಕಂಡಿದ್ದೇವೆ. ಇದರಿಂದ ಕರಾವಳಿಯಲ್ಲಿ ಮತ್ತೆ ಅಶಾಂತಿ ಸೃಷ್ಟಿಯಾಗಬಾರದು. ಕರಾವಳಿಯ ಜನರ ನೆಮ್ಮದಿ ಹಾಳಾಗಬಾರದು. ಹಾಗಾಗಿ ತಕ್ಷಣವೇ ಪೊಲೀಸ್ ಇಲಾಖೆ ಗೋಕಳ್ಳರನ್ನು, ಅಕ್ರಮ ಗೋ ಸಾಗಾಟಗಾರರನ್ನು ಹಾಗೂ ಅಕ್ರಮ ಕಸಾಯಿಖಾನೆಗಳನ್ನು ಮಟ್ಟ ಹಾಕಲು ತಂಡ ರಚಿಸಬೇಕು ಎಂದು ಪೊಲೀಸ್ಇಲಾಖೆಗೆ ಸೂಚನೆ ನೀಡಿದ್ದಾರೆ.

ದೇವಸ್ಥಾನದ ವಠಾರದಿಂದ, ಹಟ್ಟಿಯೊಳಗೆ ನುಗ್ಗಿ ಜನರನ್ನು ಬೆದರಿಸಿ ಗೋಕದಿಯುವ ಜಾಲ ಜಿಲ್ಲೆಯಲ್ಲಿ ಸಕ್ರೀಯವಾಗಿದೆ.ಹಾಗಾಗಿ ಪೊಲೀಸ್ ಇಲಾಖೆ ತಕ್ಷಣವೇ ಕಾರ್ಯ ಪ್ರವೃತರಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗೋಕಳ್ಳರನ್ನು ಮಟ್ಟಹಾಕಬೇಕೆಂದು ಶಾಸಕ ಕಾಮತ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Facebook Comments

comments