Connect with us

    LATEST NEWS

    ಶಬರಿಮಲೆಗೆ ಹೆಂಗಸರು ಪ್ರವೇಶಿಸಿದರೆ ಪಂದಳ ರಾಜಮನೆತನ ಶಬರಿಮಲೆಗೆ ಕಾಲಿಡಲ್ಲ ?

    ಶಬರಿಮಲೆಗೆ ಹೆಂಗಸರು ಪ್ರವೇಶಿಸಿದರೆ ಪಂದಳ ರಾಜಮನೆತನ ಶಬರಿಮಲೆಗೆ ಕಾಲಿಡಲ್ಲ ?

    ತಿರುವಂತನಪುರ, ಅಕ್ಟೋಬರ್ 05 : ಶಬರಿಮಲೆಗೆ ಹೆಂಗಸರು ಪ್ರವೇಶಿಸಿದರೆ ಇನ್ನು ಮುಂದೆ ಪಂದಳ ರಾಜಮನೆತನ ಶಬರಿಮಲೆಗೆ ಕಾಲಿಡುವುದಿಲ್ಲ.

    ಶಬರಿ ಮಲೆ ದೇವಸ್ಥಾನದ ಹದಿನೆಂಟು ಮೆಟ್ಟಿಲುಗಳನ್ನು ದಾಟಿ ಒಂದೇ ಒಂದು ಹೆಣ್ಣು ಒಳನಡೆದರೂ ಪಂದಳ ರಾಜರ ಅರಮನೆಯಲ್ಲಿರುವ ಆಭರಣದ ಪೆಟ್ಟಿಗೆ ಮುಂದೆಂದೂ ಶಬರಿ ಮಲೆಯ ಸನ್ನಿಧಾನಕ್ಕೆ ಬರುವುದಿಲ್ಲ ಎಂದು ದೇವಳಕ್ಕೆ ಆಭರಣ ನೀಡುವ ಪಂದಳ ರಾಜಮನೆತನ ಎಚ್ಚರಿಕೆ ರವಾನಿಸಿದೆ.

    ದೇವಸ್ಥಾನವು ಸರಕಾರದ ಸೊತ್ತಾಗಿರಬಹುದು. ಆದರೆ ಅಯ್ಯಪ್ಪನಿಗೆ ಸಂಬಂಧಪಟ್ಟ ಆಭರಣಗಳು ನಮ್ಮ ಕುಟುಂಬದ ಸ್ವತ್ತಾಗಿರುತ್ತದೆ.

    ಅದನ್ನು ಬಲವಂತವಾಗಿ ಯಾರೂ ತರಿಸಿಕೊಳ್ಳಲಾಗುವುದಿಲ್ಲ.

    ಹೆಂಗಸರು ಪ್ರವೇಶಿಸುವ ಶಬರಿಮಲೆಗೆ ಇನ್ನು ಮುಂದೆ ಪಂದಳ ರಾಜಮನೆತನದವರು ಕಾಲಿಡುವುದಿಲ್ಲ ಎಂಬ ಪ್ರಕಟಣೆಯ ಮೂಲಕ ಕರಾರಾಗಿ ಪ್ರಕಟಿಸುತ್ತೇವೆ ಎಂದು ಸರ್ಕಾರಕ್ಕೂ ದೇವಸ್ಥಾನದ ಆಡಳಿತ ಮಂಡಳಿಗೂ ಸುತ್ತೋಲೆಯನ್ನು ಕಳಿಸಿದ್ದಾರೆ. ಈ ನಡುವೆ ಸುದ್ಧಿಗೆ  ಸಂಬಂಧಿಸಿದಂತೆ ಇದೀಗ ಪಂದಳ ರಾಜಮನೆತನ ಸ್ಪಷ್ಟನೆಯನ್ನು ನೀಡಿದೆ ಎನ್ನಲಾಗಿದೆ.

    ಈ ರೀತಿಯ ಯಾವುದೇ ಪ್ರಕಟಣೆಗಳನ್ನು ರಾಜಮನೆತನ ಪ್ರಕಟಿಸಿಲ್ಲ ಎಂದು ಮಾಹಿತಿ ರಾಜಮನೆತನದಿಂದ ತಿಳಿದು ಬಂದಿದೆ.

    ಅಲ್ಲದೆ ಸಂಪ್ರದಾಯವನ್ನು ಯಾವುದೇ ಕಾರಣಕ್ಕೂ ಮುರಿಯಲು ಸಾಧ್ಯವಿಲ್ಲ ಎಂದೂ ರಾಜಮನೆತನದ ಸ್ಪಷ್ಟಪಡಿಸಿದೆ ಎನ್ನಲಾಗಿದೆ.

    ಇಷ್ಟಾಗಿಯೂ ತೀರ್ಪನ್ನು ಕಡ್ಡಾಯಗೊಳಿಸಿದರೆ ಶಬರಿಮಲೆಯ ತಂತ್ರಿಗಳೂ ಸಾಮೂಹಿಕವಾಗಿ ಪದತ್ಯಾಗ ಮಾಡುವುದರೊಂದಿಗೆ ಇನ್ನುಮುಂದೆ ಶಬರಿಮಲೆಗೂ ಬರುವುದಿಲ್ಲ ಎಂದು ಪಂದಳ ರಾಜಮನೆತನದವರು ತೀರ್ಮಾನಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply