Connect with us

LATEST NEWS

ವಿವಾಹ ವಿಚ್ಚೇದನಕ್ಕಾಗಿ ನ್ಯಾಯಾಲಯದ ಮೊರೆ ಹೋದ ಐಎಎಸ್ ಟಾಪರ್ಸ್

ನವದೆಹಲಿ : 2015ನೇ ಸಾಲಿನ ಐಎಎಸ್‌ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಪಡೆದಿದ್ದ ಟಿನಾ ಡಾಬಿ ಹಾಗೂ ಅವರ ಪತಿ ಅಥರ್‌ ಖಾನ್‌ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ.

 


2015ರ ಬ್ಯಾಚ್​ನ ಐಎಎಸ್​ ಪರೀಕ್ಷೆಯಲ್ಲಿ ಟೀನಾ ಡಾಬಿ ಟಾಪರ್ ಆದರೆ, ಕಾಶ್ಮೀರ ಮೂಲದ ಅಥರ್​​ ಖಾನ್​ ಅವರು ಎರಡನೇ ರ್ಯಾಂಕ್​ ಪಡೆದಿದ್ದರು. ತರಬೇತಿ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರು 2018ರಲ್ಲಿ ವಿವಾಹವಾಗಿದ್ದರು. ಇಬ್ಬರು ಸಹ ರಾಜಸ್ಥಾನ ಕೇಡರ್​ನ ಅಧಿಕಾರಿಗಳಾಗಿದ್ದು, ಜೈಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.


ಪರಸ್ಪರ ಒಪ್ಪಿಗೆ ಮೇರೆಗೆ ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಟೀನಾ ಡಾಬಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಮುಂದೆ ಖಾನ್ ಎಂಬ​ ಸರ್​ನೇಮ್​ ತೆಗೆದು ಹಾಕಿದಾಗಿನಿಂದ ಇಬ್ಬರ ನಡುವಿನ ವಿವಾಹ ಸಂಬಂಧ ಕುರಿತು ಸಾಕಷ್ಟು ಸುದ್ದಿಯಾಗಿತ್ತು.

ಅದೇ ಸಮಯದಲ್ಲಿ ಅಥರ್​ ಸಹ ಇನ್​ಸ್ಟಾಗ್ರಾಂನಲ್ಲಿ ಟೀನಾ ಅವರನ್ನು ಅನ್​ಫಾಲೋ ಮಾಡಿದ್ದು, ಇಬ್ಬರ ನಡುವೆ ಯಾವುದೂ ಸರಿಯಿಲ್ಲ ಎಂಬುದಕ್ಕೆ ಪುಷ್ಠಿ ನೀಡಿತ್ತು.
ಇನ್ನು ಟೀನಾ ಡಾಬಿ ಮತ್ತು ಅಥರ್​ ಖಾನ್​ ಮದುವೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ದಂಪತಿಗೆ ಶುಭಕೋರಿದರೆ, ಹಿಂದು ಮಹಾಸಭಾ, ಐಎಎಸ್​ ಅಧಿಕಾರಿಗಳಿಬ್ಬರ ಮದುವೆಯನ್ನು ಲವ್​ ಜಿಹಾದ್ ಎಂದು​ ಕರೆದಿದ್ದರು