ಗಾದೆ ಮಾತು ಬಿಜೆಪಿಯವರಿಗೆ ಹೇಳಿದ್ದು – ಸಿದ್ದರಾಮಯ್ಯ

ಮಂಗಳೂರು ಅಗಸ್ಟ್ 31: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಣಿಯಲಾರದ (ಸೂಳೆ) ನೆಲ ಡೊಂಕು ಅಂದಳಂತೆ ಹೇಳಿಕೆಗೆ ಧರ್ಮಸ್ಥಳದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ನಾನು ಬಿಜೆಪಿಯವರನ್ನು ಉದ್ದೇಶಿಸಿ ಹೇಳಿರೋ ಮಾತು ಅದು, ಇದು ಹಳ್ಳಿಯ ಸಾಮಾನ್ಯ ಗಾದೆ ಮಾತಾಗಿದ್ದು, ಕುಣಿಯಲಾರದ ನೃತ್ಯಗಾರ್ತಿ ನೆಲಡೊಂಕು ಎಂದು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಆದರೆ ಬಿಜೆಪಿಯವರಿಗೆ ವಿವಾದ ಮಾಡೋದೇ ಕೆಲಸ ಅದು ಬಿಟ್ಟು ಅವರಿಗೆ ಬೇರೆ ಕೆಲಸ ಇಲ್ಲ ಎಂದು ಆರೋಪಿಸಿದರು.

ಕಾಂಗ್ರೇಸ್ ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ದೇವೇಗೌಡರೇ ಬೀಳಿಸಿರೋದು ಎಂದು ಧರ್ಮಸ್ಥಳ ದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

Facebook Comments

comments