Connect with us

    KARNATAKA

    ದನದ ಮಾಂಸವನ್ನು ನಾನು ತಿನ್ನುತ್ತೇನೆ: ಸಿದ್ದರಾಮಯ್ಯ

    ಬೆಂಗಳೂರು, ಡಿಸೆಂಬರ್ 29: ನಾನು ದನದ ಮಾಂಸವನ್ನು ತಿನ್ನುತ್ತೇನೆ. ಆಹಾರ ಪದ್ಧತಿ ನನ್ನ ಹಕ್ಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಛರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ದನದ ಮಾಂಸ ತಿನ್ನುತ್ತೇನೆ ಎಂದು ಸ್ಪಷ್ಟಪಡಿಸಿದರು.

    ನಾನು ದನದ ಮಾಂಸವನ್ನು ತಿನ್ನುತ್ತೇನೆ. ಆಹಾರ ಪದ್ಧತಿ ನನ್ನ ಹಕ್ಕು. ಅದನ್ನ ಕೇಳುವುದಕ್ಕೆ ನೀನ್ಯಾರು? ಅಧಿವೇಶನದಲ್ಲಿಯೇ ನಾನು ಕೇಳಿದ್ದೇನೆ. ನಮ್ಮವರು ಇದನ್ನು ಗಟ್ಟಿಯಾಗಿ ಹೇಳಲ್ಲ. ಕೆಲ ವಿಚಾರಗಳ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು ಎಂದು ಅವರು ಹೇಳಿದರು.

    ಗೋವನ್ನು ನಾವು ಪೂಜಿಸುತ್ತೇವೆ ಎಂಬುದು ಸರಿ. ಆದರೆ ವಯಸ್ಸಾದ ಹಸು, ಗಂಡು ಕರು ಏನ್ ಮಾಡೋದು ಹೇಳಿ? ಎಂದು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್‌ನವರು ಕೂಡ ಈ ವಿಚಾರದ ಬಗ್ಗೆ ಹೇಳಬೇಕು. ಬೇರೆ ಜಾತಿಯವರು ಏನೋ ಅನ್ಕೊಳ್ತಾರೆಂದು ಸುಮ್ಮನಾಗ್ತಾರೆ. ಮೌನಕ್ಕೆ ಶರಣಾಗುವುದನ್ನು ಬಿಡಬೇಕು. ನಮ್ಮ ಸಿದ್ಧಾಂತವನ್ನ ನಾವು ಹೇಳಬೇಕು ಎಂದು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply