Connect with us

LATEST NEWS

ಮದುವೆ ನಂತರ ಪತ್ನಿಗಾಗಿ18 ಬಾರಿ ಬಾರಿ ಮನೆ ಬದಲಾಯಿಸಿದ ಗಂಡ : ಕೊನೆಗೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ…!?

ನವದೆಹಲಿ, ಎಪ್ರಿಲ್ 13 : ಭೋಪಾಲ್‌ನ ದಂಪತಿಗಳು ಮದುವೆಯಾದ ಮೂರು ವರ್ಷಗಳಲ್ಲಿ 18 ಮನೆಗಳನ್ನು ಬದಲಾಯಿಸಿದ್ದಾರೆ, ಅದಕ್ಕೆ ಕಾರಣವೆಂದ್ರೆ, ಹೆಂಡತಿಯ ಜಿರಳೆಗಳ ಭಯದಿಂದ ಎನ್ನಲಾಗಿದೆ.

ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಪತಿ, ಪತ್ನಿಯ ಈ ವರ್ತನೆಯಿಂದ ಸ್ನೇಹಿತರು ಮತ್ತು ಕುಟುಂಬದವರಲ್ಲಿ ಮುಜುಗರಕ್ಕೊಳಗಾಗುವುದರಿಂದ ಬೇಸತ್ತಿದ್ದು ಡೈವೋರ್ಸ್‌ ಅರ್ಜಿ ಸಲ್ಲಿಸಲು ಯೋಜಿಸುತ್ತಿದ್ದಾರೆ ಅಂತ ಖಾಸಗಿ ಮಧ್ಯಮವೊಂದು ವರದಿ ಮಾಡಿದೆ.

ದಂಪತಿಗಳು 2018 ರಲ್ಲಿ ಮೊದಲ ಬಾರಿಗೆ ಮನೆಗಳನ್ನು ಬದಲಾಯಿಸಿದರು ಆದರೆ ದುರದೃಷ್ಟವಶಾತ್ ಅಗಿನಿಂದ ಜಿರಳೆ ಕಾಟ ನಿಂತಿಲ್ಲ ಎನ್ನಲಾಗಿದೆ. ಅಂದಿನಿಂದ ದಂಪತಿಗಳು 18 ಮನೆಗಳನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ. ಚಿಕಿತ್ಸೆಗಾಗಿ ಏಮ್ಸ್ನಲ್ಲಿ ಒಬ್ಬರು ಸೇರಿದಂತೆ ಅನೇಕ ಖಾಸಗಿ ಮನೋವೈದ್ಯರ ಬಳಿಗೆ ತನ್ನ ಹೆಂಡತಿಯನ್ನು ಕರೆದೊಯ್ದಿದ್ದೇನೆ ಎಂದು ವ್ಯಕ್ತಿಯು ಹೇಳಿಕೊಂಡಿದ್ದಾನೆ ಆದರೆ ಸೂಚಿಸಿದ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಲು ಅವಳು ನಿರಾಕರಿಸಿದ್ದಾಳೆ.

ಮತ್ತೊಂದೆಡೆ ಹೆಂಡತಿ ತನ್ನ ಪತಿಗೆ ತನ್ನ ಸಮಸ್ಯೆ ಅರ್ಥವಾಗುತ್ತಿಲ್ಲ ಮತ್ತು ಔಷಧಿಗಳನ್ನು ಕೊಡುವುದರ ಮೂಲಕ ಮಾನಸಿಕ ಅಸ್ವಸ್ಥೆ ಎಂದು ಘೋಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ.