ಕಲಬುರಗಿ, ಮಾರ್ಚ್26: ಪತ್ನಿಯ ಕತ್ತು ಕೊಯ್ದು ಬಳಿಕ ಆಕೆ ಮೇಲೆ ಕಾರು ಹಾಯಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದ ಬಳಿ ನಡೆದಿದೆ.
ಸಾನ್ವಿ (28), ಪತಿಯಿಂದಲೇ ಬರ್ಬರವಾಗಿ ಹತ್ಯೆಯಾದ ಮಹಿಳೆ. ಅಕ್ಷಯ್ ಕೊಲೆ ಮಾಡಿದ ಆರೋಪಿ. 28 ವರ್ಷದ ಮಹಿಳೆಯನ್ನ ಕಾರಿನಲ್ಲಿ ಕರೆತಂದು ರಸ್ತೆ ಪಕ್ಕದಲ್ಲಿರುವ ಹೊಲದಲ್ಲಿ ನಿಲ್ಲಿಸುವ ಆರೋಪಿ, ಕಾರಿನಿಂದ ಮಹಿಳೆಯನ್ನ ಎಳೆದು ಬೀಳಿಸುತ್ತಾನೆ. ನಂತರ ಕುಡುಗೋಲಿನಿಂದ ಆಕೆಯ ಕತ್ತನ್ನು ಬರ್ಬರವಾಗಿ ಕೂಯ್ದಿದ್ದಾನೆ. ಈ ವೇಳೆ ಮಹಿಳೆ ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿ ಪತಿಯ ವಿಕೃತ ಬುದ್ಧಿಗೆ ತನ್ನ ಕತ್ತನ್ನ ನೀಡಿದ್ದಾಳೆ.
ಅಕ್ಷಯ್, ಶೈಲಾ ಮಹಾರಾಷ್ಟ್ರ ಮೂಲದವರಾಗಿದ್ದಾರೆ. ಪತ್ನಿಯ ಅನೈತಿಕ ಸಂಬಂಧಕ್ಕೆ ರೊಚ್ಚಿಗೆದ್ದು ಅಕ್ಷಯ್, ಶೈಲಾಳನ್ನ ಕೊಲೆ ಮಾಡಲು ಪಕ್ಕಾ ಪ್ಲ್ಯಾನ್ ಮಾಡಿದ್ದ. ಅದರಂತೆ ಗಾಣಗಾಪುರಕ್ಕೆ ಹೋಗೊಣ ಬಾ ಅಂತ ತಂದೆ ತಾಯಿ ಸಮೇತ ಪತ್ನಿಯನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಪತ್ನಿಯನ್ನು ಹೊರಗೆ ಎಳೆದು ತನ್ನ ತಂದೆ ತಾಯಿ ಸಮ್ಮುಖದಲ್ಲೇ ಆಕೆಯ ಕುತ್ತಿಗೆಯನ್ನು ಕೊಯ್ದಿದ್ದಾನೆ. ಬಳಿಕ ಶೈಲಾ ಪ್ರಾಣ ಉಳಿಸಿಕೊಳ್ಳಲು ರಕ್ತಸಿಕ್ತದಲ್ಲೇ ಜಮೀನಿನಲ್ಲಿ ಓಡಿ ಹೋಗಿದ್ದಾಲೆ. ಆದರೂ ಬಿಡಿದ ಹಂತಕ ಪತಿ ಕಾರಿನಿಂದ ಗುದ್ದಿ ಬಳಿಕ ಆಕೆಯ ಮೇಲೆ ಹಾಯಿಸಿ ಕೊಂದಿದ್ದಾನೆ.
https://twitter.com/HateDetectors/status/2037126083590709250
ಮಹಿಳೆಯನ್ನ ಕೊಲೆ ಮಾಡುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಹತ್ಯೆಗೈಯ್ಯುತ್ತಿರುವ ಘೋರ ದೃಶ್ಯವನ್ನು ಜನ ನೋಡುತ್ತಲೇ ನಿಂತಿದ್ದರು. ಆದರೆ ಆಕೆಯನ್ನು ಕಾಪಾಡದ ಸ್ಥಿತಿಯಲ್ಲಿ ಎಲ್ಲರೂ ಗಾಬರಿಯಾಗಿದ್ದರು. ಇನ್ನು ಕೆಲವು ಕಲ್ಲುಗಳನ್ನ ಎಸೆದು ಆಕೆಯ ಪ್ರಾಣವನ್ನು ಉಳಿಸುವ ಪ್ರಯತ್ನ ಮಾಡಿದರು. ಆದರೆ ಅದ್ಯಾವುದಕ್ಕೂ ಅಂಜದ ಪಾಪಿ ಕತ್ತು ಕೂಯ್ದು ಪರಾರಿ ಆಗಿದ್ದಾನೆ. ಮಾಹಿತಿಗಳ ಪ್ರಕಾರ, ಮಹಾರಾಷ್ಟ್ರ ಮೂಲದ ವ್ಯಕ್ತಿಯಿಂದ ಕೃತ್ಯ ನಡೆದಿದೆ ಎನ್ನಲಾಗಿದೆ.