Connect with us

LATEST NEWS

ದೀನ ದಲಿತರ ದಾರಿ ದೀಪ ಈ “ರಾಜಕೇಸರಿ”

ದೀನ ದಲಿತರ ದಾರಿ ದೀಪ ಈ “ರಾಜಕೇಸರಿ”

ಮಂಗಳೂರು: ದೀನ ದಲಿತರ ಏಳಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ರಾಜಕೇಸರಿ ಸಂಘಟನೆ ಕಳೆದ ಏಳು ವರ್ಷಗಳಿಂದ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದೆ.

ಸಮಾಜದಲ್ಲಿ ಅಸಹಾಯಕರಾಗಿರುವ ಹಲವು ಕುಟುಂಬಗಳಿಗೆ ದಾರಿ ದೀಪದಂತೆ ಉರಿಯುತ್ತಿರುವ ಈ ಸಂಘಟನೆ ಈ ವರೆಗೆ ಸುಮಾರು 50 ಲಕ್ಷಕ್ಕೂ ಮಿಕ್ಕಿದ ಧನ ಸಹಾಯವನ್ನು ದೀನದಲಿತರಿಗೆ ನೀಡಿ ಸುದ್ಧಿಯಲ್ಲಿದೆ.

ಸುಮಾರು 373 ಕಡು ಬಡತನದಲ್ಲಿರುವ ಕುಟುಂಬಗಳಿಗೆ ಧನ ಸಹಾಯದ ಜೊತೆಗೆ ತಿಂಗಳಿಗೆ ಬೇಕಾದ ಆಹಾರ ಸಾಮಾಗ್ರಿಗಳನ್ನೂ ನೀಡುತ್ತಿರುವ ಈ ಸಂಘಟನೆಯಲ್ಲಿ ದಿನಗೂಲಿಯಾಗಿ ದುಡಿಯುವ ಯುವಕರೇ ಹೆಚ್ಚಾಗಿದ್ದಾರೆ.

ತಮ್ಮ ದುಡಿಮೆಯ ಒಂದು ಪಾಲನ್ನು ನಿರ್ಗತಿಕರಿಗೆ ಹಂಚಬೇಕು ಎನ್ನುವ ಧ್ಯೇಯೋದ್ಧೇಶದಿಂದ ಆರಂಭಗೊಂಡ ರಾಜಕೇಸರಿ ಸಂಘಟನೆ ಇದೀಗ ರಾಜ್ಯದ ವಿವಿಧೆಡೆಗಳಲ್ಲೂ ತಮ್ಮ ಸಹ ಸಂಘಟನೆಗಳನ್ನು ಆರಂಭಿಸಿದೆ.

ಉಡುಪಿ,ದಕ್ಷಿಣಕನ್ನಡ, ದಾವಣಗೆರೆ,ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ ಬಡು ಕುಟುಂಬಗಳಿಗಾಗಿ ದುಡಿಯುವ ಈ ಸಂಘಟನೆ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸುವ ಯೋಜನೆಯನ್ನೂ ಹೊಂದಿದೆ.