Connect with us

    LATEST NEWS

    ಬಡ ವಿಧವೆಗೆ ನೆರವು; ಮನೆ ಬಾಡಿಗೆ, ಚಿಕಿತ್ಸಾ ವೆಚ್ಚ ತೀರಿಸಿದ ಜಮಾತೇ ಇಸ್ಲಾಮಿ ಹಿಂದ್

    ಮಂಗಳೂರು, ಜೂ.26 : ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿಧವೆ ಮಹಿಳೆ ಅಂಗಾಂಗ ವೈಫಲ್ಯಕ್ಕೊಳಗಾಗಿ ಸಂಕಷ್ಟಕ್ಕೀಡಾಗಿದ್ದರು. ಈ ಬಗ್ಗೆ ತಿಳಿದ ತೊಕ್ಕೊಟ್ಟಿನ ಜಮಾತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕವು ಮೂರು ತಿಂಗಳ ಬಾಡಿಗೆ ಹಣ ನೀಡಿದ್ದಲ್ಲದೆ ಚಿಕಿತ್ಸಾ ವೆಚ್ಚ ನೋಡಿಕೊಳ್ಳಲು ಮುಂದೆ ಬಂದಿದೆ.


    ಮಹಿಳೆ ಈ ಹಿಂದೆ ಕೆಲಸ ಮಾಡುತ್ತಿದ್ದರೂ, ಲಾಕ್ ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡಿದ್ದರು. ಜೊತೆಗೆ, ಅನಾರೋಗ್ಯ ಬಾಧಿಸಿದ್ದು ಮನೆಯಲ್ಲೇ ಮಲಗುವ ಸ್ಥಿತಿ ಎದುರಾಗಿತ್ತು. ಮಹಿಳೆಯ ದಯನೀಯ ಸ್ಥಿತಿ ಬಗ್ಗೆ ಬೇರೆಯವರಿಂದ ಜಮಾತೆ ಘಟಕವು ಸಹಾಯ ನೀಡಲು ಮುಂದೆ ಬಂದಿದೆ. ಸಂಘಟನೆಯ ಪ್ರಮುಖರು ಮಹಿಳೆಯ ಮನೆಗೆ ತೆರಳಿ ಬಾಕಿ ಉಳಿದಿದ್ದ ಬಾಡಿಗೆ ಹಣವನ್ನು ಮನೆ ಮಾಲಕಿಗೆ ನೀಡಿದ್ದಾರೆ.

     

    ಜಮಾಅತೆ ಇಸ್ಲಾಮೀ ಹಿಂದ್ ನ ಮಾನವೀಯ ಕಾರ್ಯವನ್ನು ಸ್ಥಳೀಯರು ಪ್ರಶಂಸಿಸಿದ್ದಾರೆ. ಒಂಟಿಯಾಗಿರುವ ಮಹಿಳೆಗೆ ಸಮಾಜದ ಸಹೃದಯಿ ದಾನಿಗಳು ಸಹಕಾರ ನೀಡುವಂತೆ ಕೋರಿದ್ದಾರೆ.
    ಎಫ್.ಐ.ಟಿ.ಯು ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್, ಜಮಾಅತೆ ಇಸ್ಲಾಮೀ ಹಿಂದ್ ನ ಸದಸ್ಯರಾದ ಅಬ್ದುಲ್ ರವೂಫ್ ಮತ್ತಿತರರು ಮಾನವೀಯ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply