Connect with us

    LATEST NEWS

    ಹುಲಿವೇಷಧಾರಿಗಳ ಮೇಲೆ ದೈವಾವೇಶ

    ಹುಲಿವೇಷಧಾರಿಗಳ ಮೇಲೆ ದೈವಾವೇಶ

    ಉಡುಪಿ ಸೆಪ್ಟೆಂಬರ್ 16: ಉಡುಪಿಯಲ್ಲಿ ಹುಲಿ ವೇಷಧಾರಿಗಳಿಗೆ ದೈವಾವೇಶ ಬಂದಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ಹುಲಿಕುಣಿತದ ಸಂದರ್ಭದಲ್ಲಿ ಇಬ್ಬರು ಹುಲಿ ವೇಷದಾರಿಗಳ ಮೈಮೇಲೆ ದೈವದ ಆವೇಶ ಬಂದಿದ್ದು ಈ ಇಬ್ಬರು ಹುಲಿವೇಷಧಾರಿಗಳು ಹುಲಿಯ ರೀತಿ ಹಾವಭಾವಗಳನ್ನು ತೋರಿಸಿದ್ದಾರೆ.

    ಕರಾವಳಿಯಲ್ಲಿ ಕೃಷ್ಣಾಷ್ಠಮಿ, ನವರಾತ್ರಿ, ಗಣೇಶೋತ್ಸವ ಸಂದರ್ಭದಲ್ಲಿ ಹುಲಿವೇಷ ಹಾಕಿ ಕುಣಿದು ಸೇವೆ ನೀಡುವುದು ಸರ್ವೆ ಸಾಮಾನ್ಯ, ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಹೀಗೆ ಮೊನ್ನೆ ಆರಂಭವಾದ ಗಣೇಶೋತ್ಸವದ ಸಂಭ್ರಮದಲ್ಲಿ, ಉಡುಪಿಯ ತೆಂಕ ನಿಡಿಯೂರು ವೀರಾಂಜನೇಯ ವ್ಯಾಯಾಮ ಶಾಲೆಯ ಬಳಿ 25 ಯುವಕರು ಹುಲಿವೇಷಕ್ಕೆ ಬಣ್ಣ ಹಚ್ಚಿದ್ದರು.

    ಈ ತಂಡ ಹಲವು ವರುಷಗಳಿಂದ ಹುಲಿವೇಷ ಧರಿಸಿ ಕುಣಿಯುವುದನ್ನು ಶ್ರದ್ಧೆಯಿಂದ ನಡೆಸಿಕೊಂಡು ಬಂದಿದೆ. ಕುಣಿಯುತ್ತಾ ಕುಣಿಯುತ್ತಾ ಈ ಬಾರಿ ಇಬ್ಬರು ಹುಲಿವೇಷ ಧಾರಿಗಳಿಗೆ ಏಕಾಯೇಕಿ ಆವೇಶ ಬಂದಿದೆ. ಸಂದೀಪ್ ಹಾಗೂ ಹರೀಶ್ ವಿಚಿತ್ರವಾಗಿ ವರ್ತಿಸಿದ್ದಾರೆ. ಎಲ್ಲೆಂದರಲ್ಲಿ ಓಡಲು ಯತ್ನಿಸಿದ್ದಾರೆ. ಹುಲಿ ಬಿಡುವ ಮುಹೂರ್ತ ಪೂಜೆಯ ವೇಳೆ ಯಾವುದೇ ಶಕ್ತಿಯೊಂದು ಮೈಮೇಲೆ ಅವೇಶ ಗೊಂಡಂತೆ ಭಾಸವಾಗಿದೆ.

    ನಮಗೆ ಕೆಲವು ನಿಮಿಷ ಏನಾಗಿದೆ ಎಂಬೂದೇ ಗೊತ್ತಾಗಲಿಲ್ಲ. ವಿಚಿತ್ರ ಶಕ್ತಿ ಆವರಿಸಿದಂತಾಗಿದೆ. ಕೆಲ ಕಾಲದ ನಂತರ ಸಹಜ ಸ್ಥಿತಿಗೆ ಬಂದಿದ್ದೇವೆ. ಆಮೇಲೆ ಬಹಳ ಸುಸ್ತಾದಂತಾಗಿತ್ತು ಎಂದು ಯುವಕರಿಬ್ಬರು ಪತ್ರಿಕ್ರಿಯಿಸಿದ್ದಾರೆ.

    ಹುಲಿ ದೇವಿಯ ವಾಹನವಾಗಿರುವುದರಿಂದ ದೈವೀ ಶಕ್ತಿ ಆವಾಹನೆಯಾಗುತ್ತದೆ. ತೆಂಕ ನಿಡಿಯೂರಿನಲ್ಲಿ ಹುಲಿ ನರ್ತನ ಸೇವೆಗೆ ಮುನ್ನ ಧೂಪ ಹಾಕುವ ಸಂದರ್ಭ ಯುವಕರಲ್ಲಿ ದೇವಿ ಆವೇಶವಾಗಿದೆ. ಆಮೇಲೆ ತೀರ್ಥ ಪ್ರಸಾದ ಕೊಟ್ಟ ನಂತರ ಹುಲಿವೇಷಧಾರಿಗಳು ಆವೇಷ ಮುಕ್ತರಾಗಿದ್ದಾರೆ ಎಂದು ಧಾರ್ಮಿಕ ತಜ್ಞ ಶ್ರೀಕಾಂತ್ ಶೆಟ್ಟಿ ಹೇಳುತ್ತಾರೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply