ಬೆಂಗಳೂರು ಡಿಸೆಂಬರ್ 05: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಖ್ಯಾತಿ ಪಡೆದು ಬಳಿಕ ಬಿಗ್ ಬಾಸ್ ಗೂ ಹೋಗಿ ಒಂದು ಕಾಲದ ಸೋಶಿಯಲ್ ಮಿಡಿಯಾ ಸೆನ್ಸೇಶನ್ ಆಗಿದ್ದ ಹುಚ್ಚ ವೆಂಕಟ್ ಇದೀಗ ತನ್ನ ಕಣ್ಣಿನ ಆಪರೇಷನ್ ಮಾಡಲೂ ಹಣ ಇಲ್ಲ ಎಂದು ಕಣ್ಣೀರಿಟ್ಟಿದ್ದಾರೆ.


ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ನಗಬೇಕು… ಅಳುತ್ತಾ, ಅಳುತ್ತಾ.. ನಗಬೇಕು, ಅಳಬೇಕು… ನಗುತ್ತಾ ನಗುತ್ತಾ.. ಅಳಬೇಕೆಂದು ತಮಗಿರುವ ಕಷ್ಟಗಳ ನೆನೆದು ಹುಚ್ಚಾ ವೆಂಕಟ್ ಕಣ್ಣೀರಿಟ್ಟಿದ್ದಾರೆ.

ಹುಚ್ಚ ಎಂಬ ಹೆಸರೇಕು ಬಂದು ಎಂಬ ಪ್ರಶ್ನೆಗೆ, ನಾನು ಮಾಡುವ ಕೆಲಸವನ್ನು ಹುಚ್ಚು ರೀತಿಯಲ್ಲಿ ಮಾಡುತ್ತಿದ್ದೆ. ನನ್ನ ತಾಯಿ ಹುಚ್ಚನ ತರ ಆಡುತ್ತೀಯಾ ಎಂದು ಹೇಳುತ್ತಿದ್ದರು. ಹೀಗಾಗಿ ನಾನೇ ಹುಚ್ಚವೆಂಕಟ್ ಎಂದು ಹೆಸರಿಟ್ಟುಕೊಂಡೆ. ಬಿಗ್ ಬಾಸ್ ನಲ್ಲಿ ಅದೇ ಫೇಮಸ್ ಆಯಿತು ಎಂದು ಹೇಳಿದ್ದಾರೆ.
ಇದೇ ವೇಳೆ ಕಣ್ಣಿಗೇನಾಯಿತು ಎಂಬ ಪ್ರಶ್ನೆಗೆ ಉತ್ತರಿಸಿ, ಕಣ್ಣಿಗೆ ಪೊರೆ ಬಂದಿದೆ. ಅದಕ್ಕೆ ಆಪರೇಷನ್‌ ಮಾಡಿಸಬೇಕು ಎಂದು ಹೇಳಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದೇನೆ. ಮುಂದಿನ ತಿಂಗಳು ಆಪರೇಷನ್‌ ಮಾಡಿಸಬೇಕು. 57 ಸಾವಿರ ಖರ್ಚಾಗಲಿದೆ ಎಂದು ತಿಳಿಸಿದ್ದಾರೆ.

ಹಣ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಹಣ ಇಲ್ಲ, ಹೊಂದಿಸುತ್ತಿದ್ದೇನೆ. ಆದರೆ, ಜನರ ಹತ್ತಿರ ಮಾತ್ರ ಕೇಳೋದಿಲ್ಲ. ಜನ ನನಗೆ ಪ್ರೀತಿ, ಕಣ್ಣೀರು ಕೊಡುತ್ತಿದ್ದಾರೆ. ಅಷ್ಟೇ ಸಾಕು. ಅಕ್ಕ-ಭಾವನ ಮನೆಯಲ್ಲಿರುವುದಾಗಿ ತಿಳಿಸಿರುವ ಹುಚ್ಚಾ ವೆಂಕಟ್ ಅವರು, ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ತಮ್ಮ ಬ್ಯಾಂಕ್‌ ಖಾತೆಯಲ್ಲಿರುವ ಹಣವನ್ನು ತೋರಿಸಿ, ಓದುವಂತೆ ಹೇಳಿದ್ದಾರೆ. ಈ ವೇಳೆ ಅವರ ಬ್ಯಾಂಕ್‌ ಅಕೌಂಟ್‌ನಲ್ಲಿ 6 ರೂಪಾಯಿ 56 ಪೈಸೆ ಹಣವಿರುವುದು ಕಂಡು ಬಂದಿದೆ.

Share Information