ಮಡಿಕೇರಿಯಲ್ಲಿ ಹುಚ್ಚ ವೆಂಕಟ್ ಹುಚ್ಚಾಟ… ಸ್ಥಳೀಯರಿಂದ ಬಿತ್ತು ಗೂಸಾ…

ಮಡಿಕೇರಿ ಅಗಸ್ಟ್ 29: ಇತ್ತೀಚೆಗೆ ಚೆನೈನಲ್ಲಿ ಹರಕು ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದ ಹುಚ್ಚ ವೆಂಕಟ್ ಇಂದು ಮಡಿಕೇರಿ ಸ್ಥಳೀಯರೊಬ್ಬರ ಮೇಲೆ ಹಲ್ಲೆ ನಡೆಸಿ ತಾನೂ ಸಾರ್ವಜನಿಕರಿಂದ ಧರ್ಮದೇಟು ತಿಂದಿರುವ ಘಟನೆ ನಡೆದಿದೆ.

ಚೆನೈನ ರಸ್ತೆಗಳಲ್ಲಿ ಕೊಳಕು ಬಟ್ಟೆ ಧರಿಸಿ ತಿರುಗುತ್ತಿದ್ದ ಹುಚ್ಚ ವೆಂಕಟ್ ಮಂಡ್ಯ ನಂತರ ಇಂದು ಸಂಜೆ ಮಡಿಕೇರಿ ನಗರದ ಡಿಪೋ ಬಳಿ ಕಾಣಿಸಿಕೊಂಡರು.

ಈ ವೇಳೆ ಸ್ಥಳೀಯರಾದ ದಿಲೀಪ್ ಎಂಬವರು ತಮ್ಮ ಕಾರನ್ನು ಡಿಪೋ ಬಳಿ ನಿಲ್ಲಿಸಿ ಸಮೀಪದ ಎಟಿಎಂಗೆ ಹೋಗಿದ್ದರು. ಎಟಿಎಂನಿಂದ ಹಿಂತಿರುಗುತ್ತಿದ್ದ ದಿಲೀಪ್ ಸಾಮಾನ್ಯವಾಗಿಯೇ ಹುಚ್ಚ ವೆಂಕಟ್ ಅವರನ್ನು ನೋಡಿದ್ದಾರೆ. ಇಷ್ಟಕ್ಕೆ ಕೆರಳಿದ ಹುಚ್ಚ ವೆಂಕಟ್ ‘ನನ್ನ ಯಾಕೆ ಗುರಾಯಿಸುತ್ತಿದ್ದೀಯಾ’ ಎಂದು ತಕರಾರು ಎತ್ತಿದ್ದಾರೆ.

ದಿಲೀಪ್ ಉತ್ತರಿಸಲು ಯತ್ನಿಸುತ್ತಿದ್ದಂತೆ ಹುಚ್ಚ ವೆಂಕಟ್ ಏಕಾಏಕಿ ದಾಳಿ ಮಾಡಲು ಆರಂಭಿಸಿದ್ದಾರೆ. ದಿಲೀಪ್ ತಪ್ಪಿಸಿಕೊಳ್ಳುತ್ತಿದ್ದಂತೆ ಕಾರಿನತ್ತ ಆಗಮಿಸಿದ ಹುಚ್ಚ ವೆಂಕಟ್ ಸ್ಥಳದಲ್ಲಿದ್ದ ಕಲ್ಲಿನಿಂದ ಕಾರಿನ ಗ್ಲಾಸ್ ಒಡೆದಿದ್ದಾರೆ. ಅಷ್ಟೇ ಅಲ್ಲದೆ, ಕಾರಿನ ಮೇಲೆ ಕಾಲಿಟ್ಟು ದಿಲೀಪ್‍ರನ್ನು ಗದರಿಸಿದ್ದಾರೆ.

ಹುಚ್ಚ ವೆಂಕಟ್ ಹುಚ್ಚಾಟವನ್ನು ಗಮನಿಸುತ್ತಿದ್ದ ಸ್ಥಳೀಯರು ಕೋಪಗೊಂಡು, ಬುದ್ಧಿ ಹೇಳಲು ಮುಂದಾದರು. ಆದರೆ ಹುಚ್ಚ ವೆಂಕಟ್ ಸುಮ್ಮನಾಗದಿದ್ದಾಗ ಸುತ್ತುವರಿದ ಸಾರ್ವಜನಿಕರು ದಿಲೀಪ್ ಕೈಯಿಂದ ಹಲ್ಲೆ ನಡೆಸಿದ್ದಲ್ಲದೆ, ತಾವೂ ಕೂಡ ಥಳಿಸಿದ್ದಾರೆ.
ಈ ಬಗ್ಗೆ ಸಾರ್ವಜನಿಕರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಮಡಿಕೇರಿ ಪೊಲೀಸರು ಹುಚ್ಚ ವೆಂಕಟ್ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

VIDEO

Facebook Comments

comments