ಶಾರದ ಮಾತೆ ಯ ವಿಸರ್ಜನಾ ಮೆರವಣಿಗೆಗೆ ತಡೆ ಒಡ್ಡಿದ ಉಳ್ಳಾಲದ ಪೋಲೀಸ್ ಅಧಿಕಾರಿಗಳ ನಡೆಗೆ ವಿಹೆಚ್ಪಿ, ಬಜರಂಗದಳ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಉಳ್ಳಾಲ : ಶಾರದ ಮಾತೆ ಯ ವಿಸರ್ಜನಾ ಮೆರವಣಿಗೆಗೆ ತಡೆ ಒಡ್ಡಿದ ಉಳ್ಳಾಲ ದ ಪೋಲೀಸ್ ಅಧಿಕಾರಿಗಳ ನಡೆಗೆ ವಿಹೆಚ್ಪಿ, ಬಜರಂಗದಳ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ವಿಹೆಚ್ಪಿ ಬಜರಂಗದಳ ಬಿಡುಗಡೆ ಮಾಡಿದೆ.

ಐತಿಹಾಸಿಕ ದಕ್ಷಿಣ ಕನ್ನಡದ ಉಳ್ಳಾಲದ 78ನೇ ವರ್ಷದ ಶ್ರೀ ಶಾರದ ಮಾತೆಯ ವಿಸರ್ಜನಾ ಮೆರವಣಿಗೆಗೆ ತಡೆ ಒಡ್ಡಿದ ಉಳ್ಳಾಲದ ಪೋಲೀಸ್ ಅಧಿಕಾರಿಗಳ ನಡೆಯನ್ನು ಮತ್ತು ಮಹಿಳೆಯರು ಸೇರಿದಂತೆ 30 ಜನ ಶಾರದಾ ದೇವಿಯ ಭಕ್ತರ ಮೇಲೆ ಸುಳ್ಳು ಕೇಸು ದಾಖಲಿಸಿರುವುದನ್ನು ವಿಶ್ವಹಿಂದೂ ಪರಿಷತ್ -ಬಜರಂಗದಳ ತೀಕ್ಷ್ಯವಾಗಿ ಖಂಡಿಸುತ್ತದೆ ಮತ್ತು ಹಾಕಿರುವ ಸುಳ್ಳು ಕೇಸುಗಳನ್ನು ತಕ್ಷಣ ತೆಗೆದು ಹಾಕುವಂತೆ ಆಗ್ರಹಿಸುತ್ತದೆ.
ಇಂತಹ ದುರ್ವರ್ತನೆ ತೋರಿದ ಅಧಿಕಾರಿಗಳ ವಿರುದ್ಧ ದಿನಾಂಕ 05/10/2025 ಎಲ್ಲಾ ದೇವಸ್ಥಾನ – ದೈವಸ್ಥಾನ ಮತ್ತು ಭಜನಾ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಶಾರದೋತ್ಸವ ಸಮಿತಿ ಕರೆ ನೀಡಿದ್ದು ವಿಶ್ವ ಹಿಂದೂ ಪರಿಷದ್ ಬೆಂಬಲ ಸೂಚಿಸುತ್ತದೆ. ಅಲ್ಲದೇ ಅಧಿಕಾರದ ದುರ್ಬಳಕೆ ಮಾಡಿರುವಂತಹ ಉಳ್ಳಾಲದ ಪೋಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಪೋಲೀಸ್ ಆಯುಕ್ತರನ್ನು ವಿಶ್ವಹಿಂದೂ ಪರಿಷತ್ ಆಗ್ರಹಿಸುತ್ತದೆ. ಎಂದು ಜಿಲ್ಲಾಧ್ಯಕ್ಷರಾದ ಎಚ್ ಕೆ ಪುರುಷೋತ್ತಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.