ಕೇರಳ ಸೆಪ್ಟೆಂಬರ್ 19: ಕೇರಳದ ಪ್ರಮುಖದ ದೇವಸ್ಥಾನ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಇದೀಗ ಮತ್ತೆ ಸುದ್ದಿಯಲ್ಲಿದೆ. ದೇವಸ್ಥಾನದ ಮೂರ್ತಿಯೊಂದರ ಚಿನ್ನದಲ್ಲಿ ಸುಮಾರು 4.5 ಕೆಜಿ ಚಿನ್ನ ಕಡಿಮೆಯಾಗಿದ್ದು, ಈ ಕುರಿತಂತೆ ಇದೀಗ ಕೇರಳ ಹೈಕೋರ್ಟ್ ತನಿಖೆಗೆ ಸೂಚಿಸಿದೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಶಬರಿಮಲೆ ಅಯ್ಯಪ್ಪ ದೇವಾಲಯವು ಭಾರತದ ಅತ್ಯಂತ ಶ್ರೀಮಂತ ಮತ್ತು ಹೆಚ್ಚು  ಭಕ್ತರು ಭೇಟಿ ನೀಡುವ ಯಾತ್ರಾಸ್ಥಳಗಳಲ್ಲಿ ಒಂದಾಗಿದೆ. ಆಧ್ಯಾತ್ಮಿಕ ಗೌರವದ ಹೊರತಾಗಿ, ಕೇರಳದ ಆದಾಯದ ಪ್ರಮುಖ ದೇವಾಲಯ ಇದಾಗಿದೆ.


ಶಬರಿಮಲೆ ದೇವಾಲಯವು 227.824 ಕೆಜಿ ಯಷ್ಟು ಚಿನ್ನವನ್ನು ಹೊಂದಿದ್ದು, ಇದನ್ನು ದೈನಂದಿನ ಆಚರಣೆಗಳು ಅಥವಾ ಇತರ ದೇವಾಲಯದ ಉದ್ದೇಶಗಳಿಗಾಗಿ ಮೀಸಲಿಟ್ಟಿಲ್ಲ ಎಂದು ನವೆಂಬರ್ 2024 ರಲ್ಲಿ ಮಾತೃಭೂಮಿ ವರದಿ ಮಾಡಿದೆ. ಈ ಬಳಕೆಯಾಗದ ಚಿನ್ನವನ್ನು ಇತ್ತೀಚೆಗೆ ಠೇವಣಿ ಯೋಜನೆಯ ಅಡಿಯಲ್ಲಿ ತರಲಾಗಿದ್ದು, ಇದರಿಂದಾಗಿ ಶಬರಿಮಲೆ ದೇವಾಲಯವು ಬಡ್ಡಿಯನ್ನು ಗಳಿಸುತ್ತದೆ. ಚಿನ್ನದ ಜೊತೆಗೆ, ಶಬರಿಮಲೆಯಲ್ಲಿ ಸುಮಾರು 2,994 ಕೆಜಿ ಬೆಳ್ಳಿ ಕೂಡ ಇದೆ ಎಂದು ವರದಿಯಾಗಿದೆ.


ಸೆಪ್ಟೆಂಬರ್ 2025 ರ ಹೊತ್ತಿಗೆ, ಶಬರಿಮಲೆಯ ಅಂದಾಜು ನಿವ್ವಳ ಮೌಲ್ಯವು 245 ಕೋಟಿ ರೂಪಾಯಿಗಳಾಗಿದ್ದು, ವಾರ್ಷಿಕ ಆದಾಯವು (2023 ರ ತೀರ್ಥಯಾತ್ರೆಯ ಅವಧಿಯಲ್ಲಿ) 320 ಕೋಟಿ ರೂಪಾಯಿಗಳಷ್ಟಿದೆ.
ಪ್ರತಿ ವರ್ಷ, 15 ಕಿಲೋಗ್ರಾಂಗಳಷ್ಟು ಚಿನ್ನ ಭಕ್ತರಿಂದ ಹರಕೆ ರೂಪದಲ್ಲಿ ಬರುತ್ತಿದೆ. ಮನೋರಮಾದ ವರದಿಯ ಪ್ರಕಾರ, 2025 ರ ಜನವರಿಯಲ್ಲಿ ಮುಕ್ತಾಯಗೊಂಡ ಎರಡು ತಿಂಗಳ ಉತ್ಸವ ಮಂಡಲ-ಮಕರವಿಳಕ್ಕು ವಿನಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಒಟ್ಟು 440 ಕೋಟಿ ರೂ ಆದಾಯ ಬಂದಿದೆ. ಇದು ಹಿಂದಿನ ಸೀಸನ್ ಗಿಂತ 80 ಕೋಟಿ ರೂಪಾಯಿ ಹೆಚ್ಚಳವಾಗಿದೆ.

Share Information