Connect with us

LATEST NEWS

ನಂತೂರು ಹಿಟ್ ಆಂಡ್ ರನ್ ಪ್ರಕರಣ – ನರ್ಸಿಂಗ್ ವಿಧ್ಯಾರ್ಥಿ ಸಾವು

ಮಂಗಳೂರು ಸೆಪ್ಟೆಂಬರ್ 28: ಫಲ್ಸರ್ ಬೈಕ್ ಗೆ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಂತೂರು ಬಳಿ ನಡೆದಿದ್ದು, ಅಪಘಾತದಲ್ಲಿ ಬೈಕ ಸವಾರ ನಗರದ ಖಾಸಗಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.


ಮೃತ ವಿದ್ಯಾರ್ಥಿಯನ್ನು ಮಹಾರಾಷ್ಟ್ರದ ಪುಣೆ ಮೂಲದ ಮಾನಸ್ ಉಗಾಲೆ (27) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಯೂ ತನ್ನ ಪಲ್ಸರ್ ಬೈಕಿನಲ್ಲಿ ನಂತೂರಿನಿಂದಾಗಿ ಪಂಪ್ ವೆಲ್ ನತ್ತ ಸಂಚರಿಸುತ್ತಿದ್ದಾಗ ಯಾವುದೋ ವಾಹನ ಹಿಂದಿನಿಂದ ಢಿಕ್ಕಿಯಾಗಿ ಪರಾರಿಯಾಗಿದೆ .

ಘಟನೆಯನ್ನು ಗಮನಿಸಿ ಇತರೆ ವಾಹನದವರು ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕದ್ರಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದು, ಡಿಕ್ಕಿಯಾಗಿ ಪರಾರಿಯಾದ ವಾಹನದ ಪತ್ತೆಗೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.