ಉಡುಪಿ ಮಾರ್ಚ್ 01: ನಿಗೂಢ ಕಾರಣಕ್ಕೆ ಮನನೊಂದು ವಿಧ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಹಿರಿಯಡ್ಕದ ಬೊಮ್ಮಾರಬೆಟ್ಟು ಎಂಬಲ್ಲಿ ಸಂಭವಿಸಿದೆ.

ಮೃತರನ್ನು ಸುವೀಕ್ಷಾ ಶೆಟ್ಟಿ (16) ಎಂದು ಗುರುತಿಸಲಾಗಿದೆ. ದಿನಾಂಕ 26/02/2026 ರಂದು ರಾತ್ರಿ ಮನೆಯ ಮೇಲೆ ಶೆಡ್ ನಲ್ಲಿ ಓದುತ್ತಿದ್ದು ರಾತ್ರಿ 11:00 ಸುಮಾರುಗೆ ಊಟ ಮಾಡುವಂತೆ ಮನೆಯವರು ಕರೆದಿದ್ದಾರೆ. ಈ ವೇಳೆ ಸುವೀಕ್ಷಾ ಶೆಟ್ಟಿ ನನಗೆ ಊಟ ಬೇಡ ಹಾಲು ಮತ್ತು ಪಾಯಸ ಕುಡಿದು ಮಲಗುತ್ತೇನೆ ಎಂದೂ ತಿಳಿಸಿದ್ದಾಳೆ. ನಂತರ ಅವರ ಅಮ್ಮ ಕೂಗಿ ಕರದಾಗ ಯಾವುದೆ ಉತ್ತರ ಬಾರದ ಕಾರಣ ಮಲಗಿರಬಹುದು ಎಂದು ತಿಳಿದು ಎಬ್ಬಿಸಲು ರಾತ್ರಿ ಸುಮಾರು 11:15 ಗಂಟೆಗೆ ತಾರಸಿ ಮೇಲ ಹೋಗಿ ನೋಡಲಾಗಿ ಸುವೀಕ್ಷಾ ಶೆಟ್ಟಿ ಶೆಡ್ನಲ್ಲಿದ್ದ ಕಬ್ಬಿಣದ ಜಂತಿಗೆ ನೈಲಾನ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 28/02/2026 ರಂದು ನಿಧನರಾಗಿದ್ದಾರೆ.
ಸುವೀಕ್ಷಾ ಶೆಟ್ಟಿ ಯಾವುದೋ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ ಹಿರಿಯಡ್ಕ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ.