ಪುತ್ತೂರು ಸೆಪ್ಟೆಂಬರ್ 06: ಗೋ ಭಕ್ಷಕರಿಗೆ ರಾಜ್ಯ ಸರಕಾರ ಎರಡೆರಡು ಹಂದಿ ಮರಿಗಳನ್ನು ನೀಡುವ ಇನ್ನೊಂದು ಭಾಗ್ಯವನ್ನು ನೀಡಬೇಕು ಎಂದು ಹಿಂದೂ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಪೆರ್ನೆಯಲ್ಲಿ ಹಟ್ಟಿಯಿಂದ ಗೋವನ್ನು ಕದ್ದು ಮಾಂಸ ಮಾಡಿದ ಘಟನೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮನವಿ ಮಾಡಿದ ಹಿಂದೂ ಮುಖಂಡ ರಾಧಾಕೃಷ್ಣ ಅಡ್ಯಂತಾಯ ರಾಜ್ಯ ಸರಕಾರ ಹಲವು ಭಾಗ್ಯಗಳನ್ನು ನೀಡಿದೆ. ಹೀಗಾಗಿ ಗೋ ಭಕ್ಷಕ ಕುಟುಂಬಗಳಿಗೆ ಎರಡೆರಡು ಹಂದಿ ಮರಿಗಳನ್ನು ನೀಡಬೇಕು, ಆಗ ಅವರು ಕದ್ದು ಗೋವುಗಳನ್ನು ತಿನ್ನುವವರು ಕದಿಯಲು ಮುಂದಾಗುವುದಿಲ್ಲ ಎಂದರು.

ಗೋಭಕ್ಷಕರು ಕದ್ದು ತಿನ್ನುವ ಗೋವುಗಳು ದೇಸೀ ತಳಿಗಳಲ್ಲ, ಅದು ಜರ್ಸಿ ಜಾತಿಗೆ ಸೇರಿದ ಗೋವುಗಳು, ಈ ಗೋವುಗಳನ್ನು ಹಂದಿಯ ಇಂಜೆಕ್ಷನ್ ನೀಡಿ ಹುಟ್ಟಿಸಲಾಗುತ್ತದೆ. ಆ ಗೋವುಗಳನ್ನು ತಿಂದಲ್ಲಿ ಹಂದಿ ತಿಂದಂತೆಯೇ, ಯಾವ ಯಾವ ಮಾಂಸ ತಿನ್ನುವ ಬದಲು ಹಂದಿ ಮಾಂಸವನ್ನೇ ತಿನ್ನಲಿ. ಸರಕಾರ ಈ ಮನವಿಯನ್ನು ಪುರಸ್ಕರಿಸಿ ತಕ್ಷಣ ಹಂದಿ ಮರಿಗಳನ್ನು ನೀಡುವ ವ್ಯವಸ್ಥೆ ಮಾಡಲಿದೆ ಎಂದರು,
ಅವರಿಗಾಗಿ ಶಾದಿ ಭಾಗ್ಯ ಮತ್ತು ಏನೆಲ್ಲಾ ಭಾಗ್ಯ ನೀಡಿದೆ. ಈ ಭಾಗ್ಯವನ್ನೂ ಖಂಡಿತವಾಗಿ ನೀಡಲು ಸರಕಾರ ಸಿದ್ಧವಿರಬಹುದು, ಗೋ ಭಕ್ಷಣೆ ಮಾಡದ, ಗೋವುಗಳನ್ನು ಸಂರಕ್ಷಿಸುವ ಹಲವು ಮುಸಲ್ಮಾನರಿದ್ದಾರೆ , ಅವರಿಗೆ ಈ ಮಾತು ಅನ್ವಯವಾಗೋದಿಲ್ಲ ಎಂದರು. ಇದು ಕೇವಲ ಗೋಭಕ್ಷಕರಿಗೆ ಮಾತ್ರ ಅನ್ವಯ.
ಯಾವ ಆಹಾರ ತಿನ್ನಬೇಕು ಅನ್ನೋದು ಜನರ ಸ್ವಾತಂತ್ರ್ಯ ಎಂದು ಕಾಂಗ್ರೆಸ್ ಸರಕಾರ ಹೇಳಿದೆ, ಹಾಗಾದಲ್ಲಿ ಅವರು ತಮ್ಮ ಅಕ್ಕ, ಮುದಿ ತಾಯಿಯನ್ನೂ ಕೊಂದು ಮಾಂಸ ತಿನ್ನಲಿ, ಅದು ಅವರ ತಿನ್ನುವ ಹಕ್ಕು, ಆದರೆ ಹಿಂದೂಗಳ ಮಾತೃಸ್ವರೂಪಿ ಗೋವುಗಳ ಹತ್ಯೆಯನ್ನು ಹಿಂದೂ ಸಮಾಜ ಸಹಿಸೋದಿಲ್ಲ ಎಂದು ಎಚ್ಚರಿಕೆ ನೀಡಿದರು.



