Connect with us

DAKSHINA KANNADA

ಜಿಲ್ಲೆಯಾದ್ಯಂತ ವ್ಯಾಪಿಸಿದ ” ಇದು ಹಿಂದೂ ಮನೆ ಪೋಸ್ಟರ್ “

ಜಿಲ್ಲೆಯಾದ್ಯಂತ ವ್ಯಾಪಿಸಿದ ” ಇದು ಹಿಂದೂ ಮನೆ ಪೋಸ್ಟರ್ “

ಮಂಗಳೂರು ಏಪ್ರಿಲ್ 28: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗ ಇದು ಹಿಂದೂ ಮನೆ ಎಂಬ ಪೋಸ್ಟರ್ ಕಾಣ ಸಿಗುತ್ತಿದೆ. ಕಾಂಗ್ರೇಸ್ ವಿರುದ್ದ ನಡೆಯುತ್ತಿರುವ ಈ ಪೋಸ್ಟರ್ ವಾರ್ ಈಗ ವ್ಯಾಪಕವಾಗಿ ಮುಂದುವರೆದಿದೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ವಿರುದ್ದ ಇದು ಹಿಂದೂ ಮನೆ ಕಾಂಗ್ರೇಸ್ ಮುಖಂಡರಿಗೆ ಈ ಮನೆಯೊಳಗೆ ಪ್ರವೇಶ ಇಲ್ಲ ಎಂಬ ಬೋರ್ಡ್ ರಾರಾಜಿಸ ತೊಡಗಿದೆ. ಬಂಟ್ವಾಳದ ಕನ್ಯಾನದಲ್ಲಿ ಆರಂಭವಾಗಿದ್ದ ಈ ಪೋಸ್ಟರ್ ವಾರ್ ಈಗ ಜಿಲ್ಲೆಯಾದ್ಯಂತ ವ್ಯಾಪಿಸಿದೆ.

ಬಂಟ್ವಾಳದ ಕನ್ಯಾನ ದಲ್ಲಿ ಕೆಲವು ಮನೆಗಳಿಗೆ ಸೀಮಿತ ವಾಗಿದ್ದ ಈ ಕಾಂಗ್ರೆಸ್ ವಿರೋಧಿ ಪೊಸ್ಟರ್ ವಾರ್ ಈಗ ಇತರೆಡೆಗೂ ಹಬ್ಬಿರುವುದು ದಕ್ಷಿಣಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.

ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮನೆಗಳ ಮುಂದೆ ಈ ರೀತಿಯ ಪೊಸ್ಟರ್ ಗಳು ಕಂಡು ಬಂದಿವೆ ಎಂದು ಹೇಳಲಾಗಿದ್ದು ಇದು ಹೆಚ್ಚಾಗಿರುವ ಸಾಧ್ಯತೆ ಇದೆ. ಇದು ಹಿಂದೂ ಮನೆ , ಬಡ ಮಕ್ಕಳ ಅನ್ನ ಕದ್ದವರಿಗೆ ಮತ್ತು ಅಲ್ಲಾಹುವಿನ ಕೃಪೆಯಿಂದ ಗೆದ್ದ ಕಾಂಗ್ರೆಸ್ ಪಕ್ಷದವರಿಗೆ ಈ ಮನೆಗೆ ಪ್ರವೇಶ ಇಲ್ಲ ಎಂದು‌ ಪೋಸ್ಟರ್ ಹಾಕಲಾಗಿದೆ.

ಈ ಮೊದಲು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕನ್ಯಾನ ಗ್ರಾಮದಲ್ಲಿ ಈ ರೀತಿ ಪೊಸ್ಟರ್ ಅಂಟಿಸಿದ್ದ ಮನೆಯವರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದರು. ಇದರಿಂದ ರೊಚ್ಚಿಗೆದ್ದ ಜನ ಇಡೀ ಬಂಟ್ವಾಳ ತಾಲೂಕಿನ ಹಲವೆಡೆ ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ ಪೋಸ್ಟರ್ ಅಂಟಿಸಿ ಪೊಲೀಸರಿಗೆ ಮತ್ತು ಸಚಿವ ರಮಾನಾಥ್ ರೈ ವಿರುದ್ದ ಸವಾಲೆಸದಿದ್ದಾರೆ.

ಈ ಹಿಂದೆ ಬಂಟ್ವಾಳದ ಕನ್ಯಾನ ಗ್ರಾಮದ ಅನೇಕರ ಮನೆಗಳಲ್ಲಿ ‘ಇದು ಹಿಂದೂಗಳ ಮನೆ, ಕಾಂಗ್ರೆಸ್ಸಿಗರಿಗೆ ದೂರವಿರಿ’ ಎಂಬ ಪೋಸ್ಟರ್ ಕಂಡು ಬಂದಿತ್ತು. ಈ ಪೊಸ್ಟರ್ ಅಂಟಿಸುವ ಮೂಲಕ ಬಲವಂತದ ಮತಾಂತರ ಹಾಗೂ ಅದನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿರುವುದಾಗಿ ಗ್ರಾಮಸ್ಥರು ಹೇಳಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *