Connect with us

DAKSHINA KANNADA

ಹಿಂದೂ ಜಾಗರಣ ವೇದಿಕೆ ಮುಖಂಡನ ಹತ್ಯೆ, ಮೂವರ ಕೃತ್ಯ 

ಹಿಂದೂ ಜಾಗರಣ ವೇದಿಕೆ ಮುಖಂಡನ ಹತ್ಯೆ, ಮೂವರ ಕೃತ್ಯ 

 

ಪುತ್ತೂರು,ಸೆಪ್ಟಂಬರ್ 4: ಹಿಂದೂ ಜಾಗರಣ ವೇದಿಕೆಯ ಪುತ್ತೂರು ತಾಲೂಕು ಕಾರ್ಯದರ್ಶಿ ಕಾರ್ತಿಕ್ ಮೇರ್ಲ ಎಂಬಾತನನ್ನು ದುಷ್ಕರ್ಮಿಗಳು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ.

ಸಂಪ್ಯ ಗ್ರಾಮಾಂತರ ಪೋಲೀಸ್ ಠಾಣೆ ಎದುರಿನ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಈ ಭರ್ಭರ ಹತ್ಯೆ ನಡೆದಿದೆ.

ನಿನ್ನೆ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದಲ್ಲಿಗೆ ನುಗ್ಗಿದ ದುಷ್ಕರ್ಮಿಗಳು ಕಾರ್ತಿಕ್ ಮೇರ್ಲರ ಎದೆಗೆ ಚೂರಿ ಹಾಕಿದ್ದರೆ.

ಕೊಲೆಗೆ ಈ ಹಿಂದಿನ ವೈಷಮ್ಯವೇ ಕಾರಣ ಎಂದು ತಿಳಿದುಬಂದಿದೆ.

ಫೈನಾನ್ಸ್ ವ್ಯವಹಾರದಲ್ಲಾದ ವೈಮನಸ್ಸೇ ಈ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.

ಈ ಹತ್ಯೆಯನ್ನು ಪ್ರೀತೇಶ್,ಚರಣ್ ಹಾಗೂ ಕಿರಣ್ ನಡೆಸಿರುವುದಾಗಿ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.

Facebook Comments

comments